ಆದಿಚುಂಚನಗಿರಿ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಜ್ಞಾಪಿಸುವ ಮತ್ತು ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮ ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಲಿದ್ದು.ಇದರ ಪೂರ್ವಭಾವಿ ಸಭೆ ಜ.7 ರಂದು 9.00 ಗಂಟೆಗೆ ತ್ರಿಶೂಲಿನಿ ದೇವಸ್ಥಾನ ಬೀದಿಗುಡ್ಡೆ ಬಳ್ಪ ಗ್ರಾಮದಲ್ಲಿ ಸಭೆ ನಡೆಯಿತು.



ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು,2000 ವರ್ಷ ಇತಿಹಾಸವಿರುವ ಆದಿಚುಂಚನಗಿರಿ ಸೇವಾ ಮಠಕ್ಕೆ 71 ನೇ ಪೀಠಾಧಿಪತಿಯಾಗಿ ಬಂದ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರು ಸಾವಿರಾರು ವಿದ್ಯಾಸಂಸ್ಥೆ ತೆರೆದು ಜಾತಿ ಮತ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿದರು ಅವರ ಸಾಧನೆ ಬಹಳಷ್ಟಿದೆ, ಅನ್ನ ,ಆರೋಗ್ಯ,ವಿದ್ಯೆ, ಪರಿಸರ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಇವರ ಸೇವೆ ಇದೆ ಇಂತಹ ಸಾಧಕ ಸಂತರ, 58 ಮತ್ತು 68 ಜಂಯಂತ್ಯೋತ್ಸವ ಮಂಗಳೂರಲ್ಲಿ ಆಯೋಜಿಸಿದ್ದೆವು, 78 ನೇ ಜಯಂತ್ಯೋತ್ಸವ ಪುತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ ಎಂದರು, ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮವಾರು ಭೇಟಿ ನೀಡಿ ಪೂರ್ವಭಾವಿ ಸಭೆಯಲ್ಲಿದ್ದು ಸ್ವಾಮೀಜಿಯವರು ಪಾಲ್ಗೊಳ್ಳಲಿದ್ದಾರೆ.
ಶನಿವಾರ 10.30 ಕ್ಕೆ ಸರಿಯಾಗಿ ಏನೆಕಲ್ಲು ಆದಿಶಕ್ತಿ ಭಜನಾ ಮಂಡಳಿ ಬಾಲಾಡಿಯಲ್ಲಿ,12.00 ಗಂಟೆಗೆ ಶ್ರೀರಾಮ ಭಜನಾ ಮಂಡಳಿ ಕೋಡಿಂಬಾಳದಲ್ಲಿ ನಡೆಯಿತು.ಮಧ್ಯಾಹ್ನ 2.00 ಗಂಟೆಗೆ ಮಹಿಷಾಮರ್ಧಿನಿ ದೇವಸ್ಥಾನ ಕೇರ್ಪಡ ವಠಾರದಲ್ಲಿ ಸಭೆ ನಡೆಯಿತು.

ಆದಿತ್ಯವಾರ ಜ:08:ಬೆಳಗ್ಗೆ 9.00 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದದಲ್ಲಿ,9.30ಕ್ಕೆ ಶ್ರೀ ಶಾರದಾಂಬ ಭಜನಾ ಮಂಡಳಿ ಕೈಕಂಬದಲ್ಲಿ ಸಭೆ ನಡೆಯಲಿದೆ.10.00ಗಂಟೆಗೆ ಕೂತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರ,10.30ಕ್ಕೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಬೋಳಡ್ಕ ಕೊಂಬಾರು ವಠಾರ,11.30ಗಂಟೆಗೆ ಶ್ರೀ ದುರ್ಗಾಂಬಿಕ ಭಜನಾ ಮಂಡಳಿ ಕಡ್ಯ ಕೊಣಾಜೆ ಹಾಗೂ 12.30ಕ್ಕೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮರ್ಧಾಳ ವಠಾರ ಮತ್ತು 2:00 ಗಂಟೆಗೆ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ಅಡಂಜದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಹಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ .
ವರದಿ: ಅಶೋಕ್ ಮಾಣಿಲ