ಉಡುಪಿ: ಕ್ಷುಲ್ಲಕ ಕಾರಣಕ್ಕೆ ಟ್ಯಾಟೂ ಕಲಾವಿದನ ಕೈಕಾಲು ಕಟ್ಟಿ ಏರ್ ಗನ್‌ನಿಂದ ಶೂಟ್!

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಟ್ಯಾಟೂ ಕಲಾವಿದನ ಕೈಕಾಲು ಕಟ್ಟಿ ಏರ್ ಗನ್‌ನಿಂದ ಶೂಟ್!

ಉಡುಪಿ: ಟ್ಯಾಟೂ ಬಿಡಿಸುವ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಟ್ಯಾಟೂ ಕಲಾವಿದನೋರ್ವನನ್ನು ಕಟ್ಟಿ ಹಾಕಿ ಏರ್ ಗನ್‌ನಿಂದ ಶೂಟ್ ಮಾಡಿದ ಆಘಾತಕಾರಿ ಘಟನೆ ಮಣಿಪಾಲದ ದಶರಥ ನಗರದಲ್ಲಿ ನಡೆದಿದೆ.

ದಶರಥ ನಗರದ ನಿವಾಸಿ ವಿವೇಕ್ ಯು (30) ಹಲ್ಲೆಗೊಳಗಾದ ಟ್ಯಾಟೂ ಕಲಾವಿದ. ಆರೋಪಿಯನ್ನು ಸಾಗರ್ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರು ಪ್ರಕರಣದ ಬೆನ್ನತ್ತಿದ್ದಾರೆ.

ಘಟನೆಯ ಹಿನ್ನೆಲೆ:​ ಜನವರಿ 29 ರಂದು ಆರೋಪಿ ಸಾಗರ್, ವಿವೇಕ್ ಅವರ ಮನೆಗೆ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದನು. ಈ ವೇಳೆ ವಿವೇಕ್ ಅರ್ಧದಷ್ಟು ಟ್ಯಾಟೂ ಕೆಲಸ ಮುಗಿಸಿದ್ದರು. ಆದರೆ, ಯಾವುದೋ ತಾಂತ್ರಿಕ ಅಥವಾ ವೈಯಕ್ತಿಕ ಕಾರಣಗಳಿಂದ ಟ್ಯಾಟೂ ಕೆಲಸ ಪೂರ್ಣಗೊಂಡಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಸೋಮವಾರ ಈ ವಿವಾದ ತಾರಕಕ್ಕೇರಿದ್ದು, ಸಾಗರ್ ಮತ್ತು ಆತನ ತಂಡ ವಿವೇಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ವಿವೇಕ್‌ನ ಕೈಕಾಲುಗಳನ್ನು ಕಟ್ಟಿ ಹಾಕಿ, ಏರ್ ಗನ್ ಮೂಲಕ ಗುಂಡು ಹಾರಿಸಿದ್ದಾರೆ. ಗಾಯಗೊಂಡ ವಿವೇಕ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಪರಾಧ ಪ್ರಾದೇಶಿಕ ರಾಜ್ಯ