ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಲಕ್ಷದೀಪೋತ್ಸವ ಮತ್ತು ಚಂಪಾ ಷಷ್ಠಿ: ನ.19 ರಿಂದ ಡಿ.2ರ ವರೆಗೆ ಕೆಲ ಸೇವೆಗಳಲ್ಲಿ ಬದಲಾವಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಲಕ್ಷದೀಪೋತ್ಸವ ಮತ್ತು ಚಂಪಾ ಷಷ್ಠಿ: ನ.19 ರಿಂದ ಡಿ.2ರ ವರೆಗೆ ಕೆಲ ಸೇವೆಗಳಲ್ಲಿ ಬದಲಾವಣೆ

ಸುಬ್ರಹ್ಮಣ್ಯ (ನ.14): ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಈ ವರ್ಷದ ಲಕ್ಷದೀಪೋತ್ಸವ ಮತ್ತು ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸೇವೆಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ದೇವಾಲಯದ ಆಡಳಿತ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಈ ಅವಧಿಯಲ್ಲಿ ಕೆಲವು ಪೂಜೆ-ಸೇವೆಗಳ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ದೇವಾಲಯದ ಪ್ರಕಟಣೆಯ ಪ್ರಕಾರ —

🔸 ನವೆಂಬರ್ 19 (ಲಕ್ಷದೀಪೋತ್ಸವ ) ನವೆಂಬರ್ 24 (ಚೌತಿ) ಮತ್ತು ದಿನಾಂಕ 25 ನವಂಬರ್ (ಪಂಚಮೀ) ದಿನಗಳಲ್ಲಿ ಭಕ್ತರ ಪ್ರಾರ್ಥನಾ ಸೇವೆ ರಾತ್ರಿ ಹೊತ್ತು ಇರುವುದಿಲ್ಲ. ದಿನಾಂಕ 26 ನವಂಬರ್ ಅಂದು ಮಧ್ಯಾಹ್ನದ ಪ್ರಾರ್ಥನಾ ಸೇವೆ ಇರುವುದಿಲ್ಲ.

🔸 ದಿನಾಂಕ 26-11-2025 ರ ಚಂಪಾ ಷಷ್ಠಿ ದಿನ ಅಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

🔸ದಿನಾಂಕ 19-11-2025 (ಲಕ್ಷದೀಪೋತ್ಸವ), ದಿನಾಂಕ 24-11-2025 (ಚೌತಿ), ದಿನಾಂಕ 25-11-2025 (ಪಂಚಮಿ), ದಿನಾಂಕ 26-11-2025 (ಚಂಪಾ ಷಷ್ಠಿ) ಮತ್ತು ದಿನಾಂಕ 02-12-2025 (ಮಹಾಸಂಪ್ರೋಕ್ಷಣೆ) ರಂದು ಪಂಚಾಮೃತ ಅಭಿಷೇಕ ಸೇವೆ ಇರುವುದಿಲ್ಲ.

🔸 ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಪ್ರಯುಕ್ತ ನ.16 ರಿಂದ ಡಿ. 2ರ ವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.

🔸 ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಪ್ರಯುಕ್ತ ನ.14 ರಿಂದ ಡಿ. 2ರ ವರೆಗೆ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ.

ದೇವಾಲಯದ ಅಧಿಕಾರಿಗಳು ಭಕ್ತರಿಗೆ ಮುಂಚಿತವಾಗಿ ಸೇವಾ ಬುಕಿಂಗ್‌ಗಳ ಸಮಯದಲ್ಲಿ ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ವಿನಂತಿಸಿದ್ದಾರೆ. ಲಕ್ಷದೀಪೋತ್ಸವ ಮತ್ತು ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಕಾಲದಲ್ಲಿ ಸಾವಿರಾರು ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇದೆ.

Uncategorized