ಉಪ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸಿ.ಪಿ. ರಾಧಕೃಷ್ಣನ್ ಶ್ರೀರಾಮ ಮಂದಿರ ದರ್ಶನ

ಉಪ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸಿ.ಪಿ. ರಾಧಕೃಷ್ಣನ್ ಶ್ರೀರಾಮ ಮಂದಿರ ದರ್ಶನ

ದೆಹಲಿ: ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಕೃಷ್ಣನ್ ಇಂದು ದೆಹಲಿಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು. ಉಪ ರಾಷ್ಟ್ರಪತಿ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿರುವ ಸಂದರ್ಭದಲ್ಲಿ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿ.ಪಿ. ರಾಧಕೃಷ್ಣನ್ ಬಿಜೆಪಿ ಹಿರಿಯ ನಾಯಕರು. ಅವರು ತಮಿಳುನಾಡಿನಲ್ಲಿ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದು, ಜಾರ್ಖಂಡ್, ಪುದುಚೇರಿ, ತೆಲಂಗಾಣ ರಾಜ್ಯಪಾಲರಾಗಿ ಹಾಗೂ ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿ ಅವರನ್ನು ಆಗಸ್ಟ್ ತಿಂಗಳಲ್ಲಿ ಘೋಷಿಸಲಾಯಿತು.

ಸೆಪ್ಟೆಂಬರ್ 9ರಂದು ನಡೆಯುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಕೃಷ್ಣನ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಬಿ. ಸುಧರ್ಷನ್ ರೆಡ್ಡಿ ನಡುವೆ ನೇರ ಪೈಪೋಟಿ ನಡೆಯಲಿದೆ. ಒಟ್ಟು 781 ಮತದಾರರಲ್ಲಿ 386 ಮತಗಳು ಬಹುಮತಕ್ಕೆ ಅಗತ್ಯ. ಎನ್‌ಡಿಎಗೆ ಸಂಖ್ಯಾ ಬಲ ಹೆಚ್ಚು ಇರುವುದರಿಂದ ರಾಧಕೃಷ್ಣನ್ ಅವರ ಗೆಲುವು ಖಚಿತವೆಂದು ರಾಜಕೀಯ ವಲಯ ಅಂದಾಜು ಮಾಡುತ್ತಿದೆ.

ಧಾರ್ಮಿಕ ರಾಷ್ಟ್ರೀಯ