
ಸುಳ್ಯ ತಾಲೂಕಿನಲ್ಲಿ ಅಡಿಕೆ ತೋಟಗಳಿಗೆ ಬಾದಿಸಿರುವ ಎಲೆಚುಕ್ಕಿ ರೋಗ ಹಾಗು ಹಳದಿ ರೋಗ ಪೀಡಿತ ತೋಟಗಳ ವೀಕ್ಷಣೆ ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ರವರು ನಡೆಸಿದ್ದಾರೆ. ಸುಳ್ಯ ತಾಲೂಕಿಗೆ ಆಗಮಿಸಿದ ಅವರು. ತಾಲೂಕಿನ ವಿವಿಧ ಭಾಗಗಳಲ್ಲಿ ಅಡಿಕೆ ಹಳದಿ ರೋಗ ಹಾಗು ಎಲೆಚುಕ್ಕಿ ರೋಗಪೀಡಿತ ಅಡಿಕೆ ತೋಟಗಳನ್ನು ವೀಕ್ಷಿಸಿ



ಜನಪ್ರತಿನಿಧಿಗಳೊಂದಿಗೆ,ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ . ಸಚಿವ ಮುನಿರತ್ನ ಅವರಿಗೆ ಸುಳ್ಯ ಶಾಸಕ ಹಾಗು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹಳದಿ ಪೀಡಿತ ತೋಟ ಹಾಗೂ ಎಲೆಚುಕ್ಕಿ ರೋಗ ದಿಂದಾಗಿ ಅಡಿಕೆ ಬೆಳೆಗಾರರು ಪಡುತ್ತಿರುವ ಬವಣೆ, ಆರ್ಥಿಕ ಸಂಕಷ್ಟ, ಎಷ್ಟು ಎಕರೆ ಪ್ರದೇಶದಲ್ಲಿ ಈಗ ಈ ರೋಗದ ಹಾವಳಿ ಇರುವಂತದ್ದು ಇದರ ಬಗ್ಗೆ ಮಾಹಿತಿಯನ್ನು ನೀಡಿದರು ಮತ್ತು ಹಳದಿ ಪೀಡಿತ ತೋಟಗಳಲ್ಲಿ ಪರ್ಯಾಯ ಬೆಳೆಯಾಗಿ ರೈತರಿಗೆ ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆಗೆ ನೀಡುತ್ತಿರುವ ಸವಲತ್ತುಗಳನ್ನು ವಿವರಿಸಿದರು.ಸಚಿವ ಮುನಿರತ್ನ ಸುಳ್ಯಕ್ಕೆ ಬೇಟಿ

ನೀಡಿದ ಸಂದರ್ಭದಲ್ಲಿ ಶಾಲು ಹೊದಿಸಿ ಅವರು ಬರ ಮಾಡಿ ಕೊಳ್ಳಲಾಯಿತು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕದಿರೇ ಗೌಡ, ಮೈಸೂರು ವಿಭಾಗ ಜಂಟಿ ನಿರ್ದೇಶಕ ನಾಗರಾಜ್ ಎಂ, ಜಿಲ್ಲಾ ಉಪನಿರ್ದೇಶಕ ಹೆಚ್.ಆರ್.ನಾಯಕ್, ಮಂಗಳೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್.ಕೆ, ಸುಳ್ಯ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಮೊದಲಾದವರು ಪಿ.ಕೆ.ಉಪಸ್ಥಿತರಿದ್ದರು.



