ಹಳ್ಳಿ ಗಮಾರರ ವೇಷದಲ್ಲಿ ಬಂದು ಪ.ಪಂ.ನಲ್ಲಿ ನೆಲೆಸಿದ್ದ ಭ್ರಷ್ಟರನ್ನು ಭೇಟಿಯಾಡಿದ ಲೋಕಾಯುಕ್ತ ಅಧಿಕಾರಿಗಳು

ಹಳ್ಳಿ ಗಮಾರರ ವೇಷದಲ್ಲಿ ಬಂದು ಪ.ಪಂ.ನಲ್ಲಿ ನೆಲೆಸಿದ್ದ ಭ್ರಷ್ಟರನ್ನು ಭೇಟಿಯಾಡಿದ ಲೋಕಾಯುಕ್ತ ಅಧಿಕಾರಿಗಳು

ಹೊನ್ನಾವರ: ಲೋಕಯುಕ್ತ ಪೋಲಿಸರು ಮನಸು ಮಾಡಿದರೆ ಎಂತಹಾ ಬ್ರಷ್ಟರನ್ನು ಹಿಡಿಯಬಲ್ಲರು ಎನ್ನುವುದಕ್ಕೆ ಪುಷ್ಟಿ ನೀಡಬಲ್ಲ ಉದಾಹರಣೆ ಹೊನ್ನಾವರದಲ್ಲಿ ಕಂಡು ಬಂದಿದೆ‌.

ಪಟ್ಟಣ ಪಂಚಾಯಿತ ಭ್ರಷ್ಟ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮತ್ತು ಅಲ್ಲಿನ ಭ್ರಷ್ಟ ಸದಸ್ಯ ವಿಜಯ ಕಾಮತ್ ರನ್ನು ವ್ಯಕ್ತಿಯೊರ್ವರಿಗೆ ಖಾತಾ ಮಾಡಲು ರೂ. 60 ಸಾವಿರ ಹಣ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ಮಾರುವೇಷದಲ್ಲಿ ಬಂದು ರೆಡ್ ಹ್ಯಾಂಡ್ ಆಗಿ ಭ್ರಷ್ಟರನ್ನು ಹಿಡಿದ ಘಟನೆ ಇಂದು ನಡೆದಿದೆ.

ಹೌದು, ಪಟ್ಟಣ ಪಂಚಾಯತ ಕಚೇರಿಯಲ್ಲಿ ಹಳ್ಳಿಯ ಗಮಾರರ ವೇಶದಲ್ಲಿ ಬಂದು ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಮುಖ್ಯಾಧಿಕಾರಿ ಯನ್ನು ಬಂಧಿಸಿ ಎಲ್ಲಾ ತನಿಖೆ ಮುಗಿಸಿ ಕಾರವಾರಕ್ಕೆ ಇವರನ್ನು ಸಂಜೆ ವೇಳೆಗೆ ಕರೆದೊಯ್ಯಲಾಗಿದೆ. 

ಈ ಮೇಲಿನ ಚಿತ್ರದಲ್ಲಿ ಕುಳಿತಿರುವ ಭ್ರಷ್ಟ ವಿಜಯ ಕಾಮತನ ಕೈ ಹಿಡಿದು ನಿಂತಿರುವವರೇ, ಯಾವುದೋ ಮದುವೆ, ಮುಂಜಿಗೋ ಅಡುಗೆ ಮಾಡಲು ಬಂದ ಬಾಣಸಿಗರಂತೆ ಕಾಣುತ್ತಿರುವ ಲೋಕಾಯುಕ್ತ ಸಿಬ್ಬಂದಿಗಳು. ಹೇಗಿದೆ ನೋಡಿ ಲೋಕಾಯುಕ್ತರ ಈ ಭ್ರಷ್ಟರ ಬೇಟೆ..!

ರಾಜ್ಯ