ಮೈಸೂರು 9ನೇ ಕ್ರಾಸ್ ಕಾಲುವೆಯಲ್ಲಿ ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆ ಸೆರೆ.

ಮೈಸೂರು 9ನೇ ಕ್ರಾಸ್ ಕಾಲುವೆಯಲ್ಲಿ ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆ ಸೆರೆ.


ಮೈಸೂರು: ಕಳೆದೊಂದು ತಿಂಗಳಿನಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ.ಅರಣ್ಯ ಇಲಾಖೆ,ಮೈಸೂರು ಮೃಗಾಲಯ ಹಾಗೂ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯರ ನೆರವಿನಿಂದ ಗುರುವಾರ ನಗರದ ಎಲೆತೋಟದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.
ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿಯ ರಾಜಕಾಲುವೆಯಲ್ಲಿ ಕಳೆದ ಒಂದು ತಿಂಗಳಿಂದ ಹತ್ತಾರು ಬಾರಿ ಕಾಣಿಸಿಕೊಂಡಿದ್ದ ಮೊಸಳೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು.ಕೆಲವು ದಿನಗಳ ಹಿಂದೆ ಕರುವೊಂದನ್ನ ಬಲಿ ಪಡೆದಿತ್ತು.ಮೊಸಳೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ತೀವ್ರ ಒತ್ತಡ ಹೇರಿದ್ದರು.ಅರಣ್ಯಾಧಿಕಾರಿಗಳು ನಡೆಸಿದ ಕೆಲವು ಪ್ರಯತ್ನಗಳು ವಿಫಲವಾಗಿದ್ದವು.ಚೆಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಾಮುಚ್ಚಾಲೆ ಆಟವಾಡಿಸುತ್ತಿತ್ತು.
ಇಂದು ಜೆಸಿಬಿ ಮೂಲಕ ಕಾರ್ಯಾಚರಣೆಯನ್ನ ತೀವ್ರಗೊಳಿಸಿದ ಸಿಬ್ಬಂದಿ ಮೊಸಳೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಇದೀಗ ಮೊಸಳೆ ಸೆರೆಸಿಕ್ಕಿದ್ದು ಸ್ಥಳೀಯರಲ್ಲಿ ಆತಂಕ ನಿವಾರಣೆಯಾದಂತಾಗಿದೆ.ಸೆರೆ ಸಿಕ್ಕ ಮೊಸಳೆಯನ್ನ ಕಬಿನಿ ಜಲಾಶಯದಲ್ಲಿ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ