ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಡಾ. ಅನುರಾಧಾ ಕುರುಂಜಿ

ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಡಾ. ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು ಇವರು ಅಕ್ಟೋಬರ್ 14 ಮತ್ತು 15 ರಂದು ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡ “ನಾನೂ,,,,,,ನಾಯಕ-23” ಎಂಬ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿದದಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಘನ ಸರಕಾರದ ಸಚಿವರುಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳುವ ಈ ತರಬೇತಿ ಶಿಬಿರದಲ್ಲಿ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರು ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಿದ್ದಾರೆ. ತರಬೇತಿ ಶಿಬಿರದ “ ನಾನೂ ಮಹಿಳೆ, ನನ್ನ ನಡಿಗೆ ಎತ್ತ” ಅಧಿವೇಶನದ ಕಾರ್ಯಕ್ರಮ ನಿರೂಪಣೆಯನ್ನು ಮಾಡಲಿರುವ ಡಾ ಅನುರಾಧಾ ಕುರುಂಜಿಯವರು ದಕ್ಷಿಣ ಕನ್ನಡ ಜಿಲ್ಲೆಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಉಪಾಧ್ಯಕ್ಷರೂ ಆಗಿದ್ದಾರೆ.

ರಾಜ್ಯ