
ಬಂಟ್ವಾಳ:ಕೆ.ಎಸ್.ಅರ್ .ಟಿ.ಸಿ.ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ರಾಯಿ ನಿವಾಸಿ ಫ್ರಾನ್ಸಿಸ್ ಲೊಬೋ ಗಾಯಗೊಂಡ ವ್ಯಕ್ತಿ.
ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ ಕಡೆ ಹೋಗುವ ವೇಳೆ ನಾಲ್ಕು ಮಾರ್ಗ ಕೂಡುವ ಬೈಪಾಸ್ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ.
ಬೈಕ್ ಸವಾರ ಬಂಟ್ವಾಳದಿಂದ ಹೈವೆಯ ಮೂಲಕ ಮೂಡಬಿದಿರೆ ರಸ್ತೆಗೆ ಏಕಾಏಕಿ ನುಗ್ಗಿಸಿದ ಪರಿಣಾಮವಾಗಿ ಬಸ್ ಚಾಲಕನಿಗೆ ಬೈಕ್ ಬರುವುದು ಕಂಡಿಲ್ಲ ,ಹಾಗಾಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸರಕಾರಿ ಬಸ್ ಚಾಲಕ ಅಪಘಾತ ತಪ್ಪಿಸಲು ಬ್ರೇಕ್ ಹಾಕಿ ಸಾಕಷ್ಟು ಪ್ರಯತ್ನ ಪಟ್ಟ ಬಗ್ಗೆ ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಅಪಘಾತದ ಸ್ಪಾಟ್
ಬಂಟ್ವಾಳ – ಧರ್ಮಸ್ಥಳ ರಸ್ತೆಯ ಮಧ್ಯೆ ಬಂಟ್ವಾಳ ಬೈಪಾಸ್ ಎಂಬಲ್ಲಿ ನಾಲ್ಕು ಮಾರ್ಗಗಳು ಜೋಡಣೆ ಯಾಗುವ ಸ್ಥಳ ವಾಹನ ಸವಾರರಿಗೆ ಬಹಳಷ್ಟು ಅಪಾಯಕಾರಿ ಸ್ಥಳವಾಗಿದೆ.
ಬಂಟ್ವಾಳ ದಿಂದ ಮೂಡುಬಿದಿರೆ ಕಡೆಗೆ ಹಾಗೂ ಬಂಟ್ವಾಳ ಪೇಟೆ ಕಡೆಗೆ ಈ ಜಂಕ್ಷನ್ ನ ಮೂಲಕವೇ ಹೋಗಬೇಕಾಗಿದೆ.ಆದರೆ ಇಲ್ಲಿ ಸರಿಯಾದ ಸರ್ಕಲ್ ಅಥವಾ ಸ್ಪೀಡ್ ಬ್ರೇಕರ್ ಆಗಲಿ ಇಲ್ಲದೆ ಇರುವುದರಿಂದ ಧರ್ಮಸ್ಥಳ ಹೈವೆ ಯಲ್ಲಿ ಹೋಗುವ ವಾಹನಗಳು ಅತಿಯಾದ ವೇಗದಲ್ಲಿ ಸಂಚರಿಸುತ್ತವೆ.ಈ ವೇಳೆ ರಸ್ತೆಯನ್ನು ಕ್ರಾಸ್ ಮಾಡಲು ಸಾಧ್ಯವಾಗದೆ ಅಪಘಾತಗಳು ನಡೆಯುತ್ತಿದೆ ಎಂದು ಸಾರ್ವಜನಿಕ ರು ದೂರುತ್ತಿದ್ದಾರೆ