
ಕುಕ್ಕೆ ಸುಬ್ರಹ್ಮಣ್ಯ ಕಾಲೇಜ್ ಗೆ ಬರುವ ವಿದ್ಯಾರ್ಥಿಗಳು ತಮ್ಮ ಬೈಕ್ ಗಳಿಗೆ ಕರ್ಕಶ ದ್ವನಿಬರುವ ಸೈಲೆನ್ಸರ್ ಅಳವಡಿಸಿ ಕಾಲೇಜು ಬಿಡುವ ಸಮಯದಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಸಂಚಾರಿಸುವ ಸಂದರ್ಭದಲ್ಲಿ ಅತೀ ವೇಗದಲ್ಲಿ ಸಂಚಾರಿಸುವುದನ್ನು ಕಂಡ ಸುಬ್ರಹ್ಮಣ್ಯ ಪೊಲೀಸ್ ರು ಇಂದು ಸೈಲೆನ್ಸರನ್ನು ಬಿಚ್ಚಿಸಿ ಹೊಸ ಸೈಲೆನ್ಸರ್ ಅಳವಡಿಸಿ ಕಳಿಸಿಕೊಟ್ಟ ಘಟನೆ ನಡೆದಿದೆ.
ಕೆ. ಎಸ್. ಎಸ್. ಕಾಲೇಜ್ ಮುಂದೆ ಇಂದು ಸವಣೂರಿನ ಹಾಗೂ ಸುಬ್ರಹ್ಮಣ್ಯದ ಕೆಲವು ಯುವಕರು ಹೀರೊ ಹೋಂಡಾ ಬೈಕ್ ಗೆ ಕರ್ಕಶ ಧ್ವನಿ ಬರುವ ಸೈಲೆನ್ಸರ್ ಅಳವಡಿಸಿ, ಅತಿ ವೇಗದಿಂದ ವನದುರ್ಗ ದೇವಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬೈಕನ್ನು ತಡೆದು ನಿಲ್ಲಿಸಿ ಮೆಕಾನಿಕಲ್ ಬರ ಹೇಳಿ ಕರ್ಕಶ ಧ್ವನಿ ಬರುವ ಸೈಲೆನ್ಸರ್ ತೆಗೆಸಿ ದಂಡ ವಿಧಿಸಿ,ಹೊಸ ಸೈಲೆನ್ಸರನ್ನ ಅಳವಡಿಸಿ ಕಳಿಸಿಕೊಟ್ಟ ಘಟನೆ ನಡೆದಿದೆ.
ಈ ಮೂಲಕ ಸುಬ್ರಮಣ್ಯ ಠಾಣಾಧಿಕಾರಿ ಮಂಜುನಾಥ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದೆ ಈ ತರದ ಹುಚ್ಚಾಟಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.



