ವಿಶ್ವ ಧ್ಯಾನ ದಿನದ ಅಂಗವಾಗಿ ಡಿಸೆಂಬರ್ 25, 2025ರಂದು ರಾತ್ರಿ 8 ಗಂಟೆಗೆ ಹಾರ್ಟ್ಫುಲ್ನೆಸ್ ಸಂಸ್ಥೆಯ ವತಿಯಿಂದ ಯೂಟ್ಯೂಬ್ ಮೂಲಕ ಮಾರ್ಗದರ್ಶಿತ ಧ್ಯಾನ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಹೆಚ್ಚು ಸಂಖ್ಯೆಯ ಜನರು ಒಂದೇ ಸಮಯದಲ್ಲಿ ಪಾಲ್ಗೊಂಡು, “ಯೂಟ್ಯೂಬ್ನಲ್ಲಿ ನಡೆಸಿದ ಮಾರ್ಗದರ್ಶಿತ ಧ್ಯಾನ ನೇರ ಪ್ರಸಾರಕ್ಕೆ ಅತಿಹೆಚ್ಚು ವೀಕ್ಷಕರನ್ನು ಸೆಳೆದ ಸಾಧನೆ” ಎಂಬ ವಿಭಾಗದಲ್ಲಿ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ.
ಈ ಐತಿಹಾಸಿಕ ಧ್ಯಾನ ಕಾರ್ಯಕ್ರಮದಲ್ಲಿ ಒಟ್ಟು 3,57,635 ಯೂಟ್ಯೂಬ್ ಅಕೌಂಟ್ಗಳ ಮೂಲಕ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಭಾರತದ ವಿವಿಧ ರಾಜ್ಯಗಳಲ್ಲದೆ ವಿಶ್ವದ 175 ದೇಶಗಳಿಂದ ಧ್ಯಾನಾಸಕ್ತರು ಆನ್ಲೈನ್ ಮೂಲಕ ಸೇರಿಕೊಂಡಿದ್ದರು. ಮಾನಸಿಕ ಶಾಂತಿ, ಆತ್ಮಸಂಯಮ ಮತ್ತು ಸಮಗ್ರ ಕಲ್ಯಾಣದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಾರ್ಟ್ಪುಲ್ನೆಸ್ ಸಂಸ್ಥೆ ಧ್ಯಾನದ ಮೂಲಕ ವೈಯಕ್ತಿಕ ಹಾಗೂ ಸಾಮಾಜಿಕ ಸಮತೋಲನವನ್ನು ಸಾಧಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯ ಸೇವಾ ಕಾರ್ಯಗಳಿಗೆ ಮತ್ತೊಂದು ಮಹತ್ವದ ಗೌರವವಾಗಿದೆ. ಈ ಸಾಧನೆ ವಿಶ್ವದಾದ್ಯಂತ ಧ್ಯಾನದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದೆ.
ವಿಶ್ವ ಧ್ಯಾನ ದಿನದಂದು ಸಾಧಿಸಲಾದ ಈ ದಾಖಲೆ ಧ್ಯಾನ ಕ್ಷೇತ್ರದಲ್ಲಿ ಹಾರ್ಟ್ಪುಲ್ನೆಸ್ ಸಂಸ್ಥೆಯ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.

