
ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗ ಸೆಂಟರ್ ಆಫ್ ಎಕ್ಸೆಲೆನ್ಸ್ ಸ್ಥಾಪನೆ

- ಉನ್ನತ ಶಿಕ್ಷಣಕ್ಕೆ ಒಂದು ಹೊಸ ಆಯಾಮವನ್ನು ನೀಡುವ ಸದುದ್ದೇಶದಿಂದ ಜನವರಿಯಲ್ಲಿ ಕರ್ನಾಟಕ ಸರಕಾರವು ₹2,500 ಕೋಟಿಯ ಯೋಜನೆಯನ್ನು ಅನುಮೋದಿಸಿದೆ. ಇದರಿಂದ ವಿದ್ಯಾರ್ಥಿಗಳ ಕೌಶಲ್ಯದಲ್ಲಿ ಅಭಿವೃದ್ಧಿಯಾಗಿ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.
- ವಿಶ್ವ ಬ್ಯಾಂಕ್ನ ಸಾಲ ಸೌಲಭ್ಯ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಪ್ರಾರಂಭವಾದ ಈ ಯೋಜನೆಯು ನಾನಾ ವಿಭಾಗಗಳ ವಿದ್ಯಾರ್ಥಿಗಳಿಗೆ ಇಂಜಿನೀರಿಂಗ್ ಮತ್ತು ಇತರ ಕೈಗಾರಿಕೆ ಸಂಬಂಧಿಸಿದ ಶಿಕ್ಷಣವನ್ನು ಹೆಚ್ಚು ಆಸಕ್ತಿಯುತವಾಗಿಸಲಿದೆ.
- ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ನಿಂದಲೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತೆ ಯೋಜನೆಯನ್ನು ರೂಪಿಸಲಾಗಿದೆ. ಕರ್ನಾಟಕ ಸರಕಾರವು ಈ ಯೋಜನೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ನೀಡುವ ಭರವಸೆಯನ್ನು ಇಟ್ಟುಕೊಂಡಿದೆ
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಪ್ರಾರಂಭ
- ಜನವರಿಯಲ್ಲಿ ಕರ್ನಾಟಕ ಸರಕಾರವು ಹಲವು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಿದೆ.
- ಸಂಧೂರಿನಲ್ಲಿ ಒಂದು ಹೊಸ ಕೌಶಲ್ಯ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ.
- ಇಂಟೆಲ್, ಟೆಸ್ಲಾ ಮುಂತಾದ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿ ಉದ್ಯೋಗಾಭಿವೃದ್ಧಿಗೆ ತರಬೇತಿ ನೀಡಲಾಗುತ್ತಿದೆ.
- “ಪ್ರಾದೇಶಿಕವಾಗಿ ಕೌಶಲ್ಯವನ್ನು ವೃದ್ಧಿಸಿ, ಜಾಗತಿಕವಾಗಿ ಉದ್ಯೋಗ ಗಳಿಸಿ” ಎಂಬ ತತ್ವದಡಿ ಭಾರತ ಕೌಶಲ್ಯ ಸ್ಪರ್ಧೆ 2025 ಮತ್ತು ವಿಶ್ವ ಕೌಶಲ್ಯ ಸ್ಪರ್ಧೆ 2026 ಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಗುತ್ತಿದೆ.
- ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೊಸ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
2025 ಅನ್ನು ‘ಗಾಂಧಿ ಭಾರತ ವರ್ಷ’ ಎಂದು ಘೋಷಣೆ
- ಮಹಾತ್ಮ ಗಾಂಧಿಜಿ 1924ರಲ್ಲಿ ಬೆಳಗಾವಿಯಲ್ಲಿ ನಡೆಸಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸುಸಂದರ್ಭದಲ್ಲಿ, ಕರ್ನಾಟಕ ಸರಕಾರವು 2025 ಅನ್ನು ‘ಗಾಂಧಿ ಭಾರತ ವರ್ಷ’ ಎಂದು ಘೋಷಿಸಿದೆ.
- ಬೆಳಗಾವಿಯಲ್ಲಿ ಗಾಂಧಿ ಸ್ಮಾರಕ ಅಭಿವೃದ್ಧಿ, ನಗರವನ್ನು ವಿಶೇಷ ದೀಪಾಲಂಕಾರದಿಂದ ಅಲಂಕರಿಸುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಪೂರ್ತಿ ಸಂಭ್ರಮಿಸಲಾಗುತ್ತಿದೆ.
