
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ಅಂಬ್ಯಲೆನ್ಸ್ ಚಾಲಕರ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ನಡುವಿನ ತಿಕ್ಕಾಟ ಸ್ಪೋಟಗೊಂಡಿದೆ.


ಸುಳ್ಯ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದ 108 ಅಂಬ್ಯುಲೆನ್ಸ್ ವಾಹನವನ್ನು ಇತ್ತೀಚೆಗೆ ಸ್ಥಳದ ಅಭಾವದಿಂದ ಆಸ್ಪತ್ರೆ ಆಡಳಿಂತ ಮಂಡಳಿ ಚಾಲಕರಿಗೆ ವಾಹನ ನಿಲ್ಲಿಸದಂತೆ ತಿಳಿಸಿತ್ತು ಅದರಂತೆ ಚಾಲಕರು 108 ವಾಹನವನ್ನು ಆಸ್ಪತ್ರೆಯಿಂದ ಹೊರಗೆ ನಿಲ್ಲಿಸಿದ್ದರು.
ಆದರೆ 108 ಅಂಬ್ಯುಲೆನ್ಸ್ ಚಾಲಕರಿಗೆ ಯಾವುದೇ ವಿಶ್ರಾಂತಿ ಕೋಣೆಯಿಲ್ಲದೆ ಅಸಮದಾನ ಹೊಂದಿದ್ದರು
ಆ.28 ರಂದು ಸುಳ್ಯ ಸರಕಾರಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಲಾಗಿ ರೋಗಿಯನ್ನು ಮಂಗಳೂರಿಗೆ ಕರೆದೊಯ್ಯಲು108 ಅಂಬ್ಯುಲೆನ್ಸ್ ತಿಳಿಸಿದಾಗ ಚಾಲಕ ನಕಾರ ಮಾಡಿದ್ದು ರೋಗಿಯ ಮನೆಯವರು ಆಸ್ಪತ್ರೆಯ ಬೇರೆ ಅಂಬ್ಯುಲೆನ್ಸ್ ಮುಖಾಂತರ ಕರೆದೊಯ್ಯಬೇಕಾದ ಸ್ಥಿತಿ ಉಂಟಾಯಿತು.
ಒಟ್ಟಿನಲ್ಲಿ ಇವರ ಈ ತಿಕ್ಕಾಟದಿಂದ ಬಡ ರೋಗಿಗಳ ಪಾಡು ಹೇಳತೀರದಾಗಿದೆ.