ಭಾರಿ ಮಳೆಗೆ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿ

ಭಾರಿ ಮಳೆಗೆ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿ

ಗುತ್ತಿಗಾರು ಗ್ರಾಮದ ಮೊಗ್ರ, ಕಮಿಲ ಭಾಗದಲ್ಲಿಇಂದು ಭಾರೀ ಮಳೆಯಾಗಿದ್ದು  ಕಳೆದ ವರ್ಷ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ.

ಅಪಾರ ಪ್ರಮಾಣದ ನೀರು ಹರಿದ ಕಾರಣ ಮರದ ದಿಮ್ಮಿಗಳು ನೀರಲ್ಲಿ ಬಂದು ತೂಗು ಸೇತುವೆಗೆ ಬಡಿದು ಕಾಲು ಸೇತುವೆಗೆ ಹಾನಿಯಾಗಿದೆ.

ಮಳೆಗಾಲದಲ್ಲಿ ಈ ಕಾಲು ಸಂಕ ಮಾತ್ರ ಭಯವಿಲ್ಲದೆ ಸಂಚರಿಸುವ ಏಕೈಕ ವ್ಯವಸ್ಥೆ ಆಗಿದ್ದು ಅದಕ್ಕೂ ತೊಂದರೆ ಉಂಟಾಗಲಿದೆ.ಇದನ್ನು ಸರ್ಕಾರದ ಹಾಗೂ ಸ್ಥಳೀಯ ಯಾವುದೇ ಇಲಾಖೆ ನೆರವು ಪಡೆಯದೆ     ಈ ಸೇತುವೆ ನಿರ್ಮಾಣ ಮಾಡಲಾಗಿತ್ತು

ಶ್ರಮದಾನದ ಮೂಲಕ ನೆರವು ಹಾಗೂ ಧನಸಹಾಯ ಮಾಡಿದ್ದರೆ, ಪರವೂರಿನ ಅನೇಕ ದಾನಿಗಳು ನೆರವು ನೀಡಿದ್ದ. ಕೆಲವು ಕಂಪನಿಗಳು ಸಹಾಯ ಮಾಡಿದ್ದರು. ಸುಮಾರು ೧ ಲಕ್ಷ ರೂ.ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು.

ರಾಜ್ಯ