ಬಳ್ಪ ನಾಪತ್ತೆಯಾಗಿದ್ದ ಯುವಕ ಶವವಾಗಿ ಹೊಳೆಯಲ್ಲಿ ಪತ್ತೆ.

ಬಳ್ಪ ನಾಪತ್ತೆಯಾಗಿದ್ದ ಯುವಕ ಶವವಾಗಿ ಹೊಳೆಯಲ್ಲಿ ಪತ್ತೆ.

ಕಡಬ: ಮೂರು ದಿನಗಳ ಹಿಂದೆ ಮನೆಯಿಂದ

ನಾಪತ್ತೆಯಾಗಿದ್ದ ದಕ್ಷಿಣ ಕನ್ನಡದ ಕಡಬದ

ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಬಳ್ಪದ ಈ ಯುವಕನ ಮೃತ ದೇಹ ಬುಧವಾರ

ಪಂಜದ ಹೊಳೆಯಲ್ಲಿ ಪತ್ತೆಯಾಗಿದೆ.ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33

ವ)ಎಂಬ ಯುವಕ ಮೂರು ದಿನಗಳ ಹಿಂದೆ

ನಾಪತ್ತೆಯಾಗಿದ್ದರು.ಈ ಬಗ್ಗೆ ಸುಬ್ರಹ್ಮಣ್ಯ

ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಯುವಕನ ಪತ್ತೆಗಾಗಿ ಊರವರು,

ಸಂಬಂಧಿಕರು ಹಗಲು ರಾತ್ರಿ ನಿರಂತರವಾಗಿ

ಹುಡುಕಿದ್ದರು.ಸುಳ್ಯದ ಮುಳುಗು ತಜ್ಜರ ತಂಡ ಅಚ್ಚು ಪ್ರಗತಿ ಅಂಬ್ಯುಲೆನ್ಸ್ ಮುಂದಾಳತ್ವದಲ್ಲಿ ಶೋಧ ನಡೆಸಿ ಶವವನ್ನು ಪತ್ತೆ ಹಚ್ಚಿದ್ದಾರೆ, .

ರಾಜ್ಯ