
ಕಳಂಜದ ಮದರಸ ವಿದ್ಯಾರ್ಥಿಗಳೊಂದಿಗೆ ಸಂಭ್ರಮದಿಂದಲೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಡಳಿತ ಕಮಿಟಿ ಅಧ್ಯಕ್ಷರು ಇಸ್ಮಾಯಿಲ್ ಪಿ.ಎಸ್, ಗೌರವಾಧ್ಯಕ್ಷರು ಎ.ಬಿ ಮೊಯ್ದೀನ್, ಕಾರ್ಯದರ್ಶಿ ಮಜೀದ್ ಎ ಕೆ, ಮಾಜಿ ಅಧ್ಯಕ್ಷರು ಮಹಮ್ಮದ್ ಕೆ.ಎಂ, ಮಾಜಿ ಅಧ್ಯಕ್ಷರು ಅಬೂಬಕ್ಕರ್ ಎನ್ ರವರು ಒಗ್ಗಟ್ಟಾಗಿ ದ್ವಜಾರೋಹಣ ನೆರವೇರಿಸಿದರು. ನಾಡಿನಲ್ಲಿ ಭಾವೈಕ್ಯತೆ ಮೂಡಿಸವಲ್ಲಿ ಒಗ್ಗಟ್ಟಾಗಿರಬೇಕು ಎಂದು ಖತೀಬರು ಅಬ್ಬಾಸ್ ಮದನಿಯವರು ಒತ್ತಿ ಹೇಳಿದರು. ಮದರಸ ವಿದ್ಯಾರ್ಥಿಗಳು ಝಂಡಾ ಊಂಚಾ ಗೀತೆಯನ್ನು ಹಾಡುವುದರೊಂದಿಗೆ, ಇಶ್ಫಾಕ್ ರವರು ಸಾರೇ ಜಹಾಂಸೆ ಅಚ್ಚಾ ಗೀತೆಯನ್ನು ಹಾಡಿದರು. ನೆರೆದಿರುವ ಎಲ್ಲರೂ ಒಗ್ಗಟ್ಟಿನಿಂದ, ಭಾವೈಕ್ಯತೆ, ಸಹೋದರತ್ವ, ಜಾತ್ಯಾತೀತ ಮನೋಭಾವ ಮೂಡಿಸಲು ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಒಕ್ಕೊರಳಿನಿಂದ ಸ್ವೀಕರಿಸಿದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯಿಂದ ಕೊನೆಗೊಳಿಸಲಾಯಿತು. ರಫೀಕ್ ಎ ಕೆ ರವರ ಸಲುವಾಗಿ ಸಿಹಿ ಹಂಚಲಾಯಿತು.



