ಅರಂತೋಡು ಕೇರಳ ಮೂಲದ ವ್ಯಕ್ತಿಗೆ ಗುಂಪಿನಿಂದ ಹಲ್ಲೆ: ಪೋಲಿಸ್ ದೂರು ಓರ್ವನ ಬಂಧನ.

ಅರಂತೋಡು ಕೇರಳ ಮೂಲದ ವ್ಯಕ್ತಿಗೆ ಗುಂಪಿನಿಂದ ಹಲ್ಲೆ: ಪೋಲಿಸ್ ದೂರು ಓರ್ವನ ಬಂಧನ.

ಸುಳ್ಯ, ಆ: ಕೇರಳದ ಹಿಂದೂ ಮಹಿಳೆಯೊಬ್ಬರಿಗೆ ಸುಳ್ಯದಲ್ಲಿ ತಂಗಲು ರೂಂ ಕೊಡಿಸಲು ಜೊತೆಗೆ ತೆರಳಿದ್ದ ಕಾರಣಕ್ಕೆ ಮುಸ್ಲಿಂ ಯುವಕನೋರ್ವನಿಗೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯ ಅರಂತೋಡು ಸಮೀಪ ಶನಿವಾರ ಪ್ರಕರಣವೊಂದು ನಡೆದಿದ್ದು ಇದಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೂಲತಃ ಮಣಪ್ಪುರಂ ನಿವಾಸಿ ಅರಂತೋಡಿನಲ್ಲಿ ರಬ್ಬರ್ ಲೀಸ್‌ಗೆ ತೋಟ ನಡೆಸುತ್ತಿರುವ ಜಲೀಲ್ ಹಲ್ಲೆಗೊಳಗಾದ ಯುವಕ. ಅವರು ಒಬ್ಬರು ಮಹಿಳೆಯೊಂದಿಗ ಸುಳ್ಯದಲ್ಲಿ ಲಾಡ್ಜ್ ಹುಡುಕುತ್ತಿದ್ದರು ಎಂದು ಸುದ್ದಿಯಾಗಿತ್ತು. ಮಹಿಳೆಯನ್ನು ಕರೆದುಕೊಂಡು ಜಲೀಲ್ ಎರಡು ಕಡೆ ರೂಂ ಪಡೆಯಲು ಯತ್ನಿಸಿದ್ದ ಎಂದು ಹೇಳಲಾಗಿತ್ತು. ಇದನ್ನು ಸುಳ್ಯದಲ್ಲಿ ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಚಾರಿಸಲು ಪ್ರಯತ್ನ ಪಟ್ಟಿದ್ದು ಈ ಸಂದರ್ಭ ಜಲೀಲ್ ಕಾರಿನಲ್ಲಿ ಸ್ಥಳ ಕಾಲಿ ಮಾಡಿದ್ದಾನೆ ಕೂಡಲೇ ಹಿಂದೂ ಕಾರ್ಯಕರ್ತರ ತಂಡ ಕಾರಿನಲ್ಲಿ ಅರಂತೋಡು ಕಡೆಗೆ ತೆರಳುತ್ತಿದ್ದ ಜಲೀಲ್‌ರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರೆಷ್ ಅಪ್ ಗೆ ರೂಂ ಬೇಕಾಗಿತ್ತು

ಅದರೆ ಹಲ್ಲೆಗೊಳಗಾದ ಜಲೀಲ್ ಮಹಿಳೆ ಮಣಪ್ಪುರಂನಲ್ಲಿ ಪರಿಚಯವಿದ್ದ ಮಹಿಳೆಯೊಬ್ಬರು ಮಡಿಕೇರಿಗೆ ಆಗಮಿಸಿದ್ದು,ಅವರಿಗೆ ಸುಳ್ಯದಲ್ಲಿ ಯಾರ ಪರಿಚಯ ಇಲ್ಲದೇ ಇದ್ದುದರಿಂದ ಪ್ರೆಷ್ ಆಪ್ ಆಗಲು ರೂಮು ವಿಚಾರಿಸದ್ದೆವು ಆದರೆ ಇದನ್ನು ಅಪಾರ್ಥ ಗ್ರಹಿಸಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಠಾಣೆಗೆ ಧಾವಿಸಿ ಬಂದ ಅರುಣ್ ಕುಮಾರ್ ಪುತ್ತಿಲ

ಹಿಂದೂ ಕಾರ್ಯಕರ್ತನ ಬಂಧನವಾಗಿದೆ ಎಂದು ತಿಳಿದು ನೂರಾರು ಸಂಖ್ಯೆಯಲ್ಕಿ ಠಾಣೆ ಮಂದೆ ಜನ ಜಮಾಯಿಸಿದ್ದು ಪುತ್ತೂರಿನಲ್ಲಿದ್ದ ಹಿಂದೂ ಪ್ರಮುಖ ಅರುಣ್ ಕುಮಾರ್ ಪುತ್ತಿಲರಿಗೆ ತಿಳಿಸಲಾಗಿ ಕೂಡಲೇ ಅವರು ಸುಳ್ಯ ಠಾಣೆಗೆ ಧಾವಿಸಿ ಬಂದಿದ್ದಾರೆ.

ರಾಜ್ಯ