
ಸುಳ್ಯ : ಬೆಳ್ತಂಗಡಿಯಲ್ಲಿ ಸೌಜನ್ಯ ಎನ್ನುವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಕ್ಕೆ ಒಳಪಡಿಸಿ ಕೊಲೆ ಮಾಡಲಾಗಿರುವ ಕೃತ್ಯದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಇಲಾಖೆ ವಿಫಲವಾದ ಬೆನ್ನಲ್ಲೆ ಸೌಜನ್ಯ ಕೊಲೆ ಮಾಡಿರುವ ನೈಜ್ಯ ಆರೋಪಿಗಳ ಪತ್ತೆಗೆ ರಾಜ್ಯದಾಧ್ಯಂತ ಬಾರೀ ಹೋರಾಟಗಳು ನಡೆಯುತ್ತಿದ್ದು, ಸುಳ್ಯ ತಾಲೂಕಿನಲ್ಲಿಯೂ ಸೌಜನ್ಯ ಮನೆಯವರಿಗೆ ನ್ಯಾಯಕ್ಕಾಗಿ ಹೋರಾಟ ಆರಂಭವಾಗಿದೆ, ಈ ಬಗ್ಗೆ ಸುಳ್ಯದಲ್ಲೂ ವಿವಿಧ ಸಂಘಟನೆಗಳಿಂದ ಸಭೆ ನಡೆದಿದ್ದು, ಕೊಲ್ಲಮೊಗ್ರದಲ್ಲಿ ಸೌಜನ್ಯ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಯಾವಾಗ ಎಂದು ಪ್ರಶ್ನಿಸಿ ಬ್ಯಾನರ್ ಅಳವಡಿಸಿದ್ದಾರೆ, ಸದ್ಯ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಕೊಲ್ಲಮೊಗ್ರು ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದ್ದು, ಸೌಜನ್ಯ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ಹೋರಾಟದ ಸೂಚನೆ ನೀಡಿದ್ದಾರೆ.ಅಲ್ಲದೇ ರಾಜಕೀಯ ಜನಪ್ರತಿನಿಧಿಗಳಿಗೆ ನಾಟುವಂತೆ ಸೌಜನ್ಯ ಹೆಣ್ಣಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

