
ರಾತ್ರಿ ವೇಳೆ ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದಿರುವ ಘಟನೆ ಹಾಗೂ ಮುಚ್ಚಿದ್ದ ಅಂಗಡಿಗಳಿಂದ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳುವುಗೈದಿರುವ ಘಟನೆ ಕನಕಮಜಲು ಅಡ್ಕಾರು ಜಾಲ್ಸೂರು ಗ್ರಾಮದಲ್ಲಿ ನಡೆದಿದೆ.


ಕನಕಮಜಲು ಯುರೇಶ್ ಬುಡ್ಲೆಗುತ್ತು ಅವರ ಸಂಬಂಧಿಯೊಬ್ಬರು ಜು.16ರಂದು ಅಪರಾಹ್ನ ನಿಧನರಾಗಿದ್ದು, ಯುರೇಶರ ಕುಟುಂಬ ಮನೆಯ ಬಾಗಿಲು ಹಾಕಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಮನೆಗೆ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ತೆರಳಿದ್ದ
ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದ ಕಳ್ಳರು ಮನೆಯೊಳಗೆ ಜಾಲಾಡಿ, ಅಂದಾಜು ಮೂವತ್ತು ಪವನ್ ಗೂ ಅಧಿಕ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ.
ಯುರೇಶ್ ಬುಡ್ಲೆಗುತ್ತು ಅವರ ಚಿನ್ನ, ಪತ್ನಿ, ಮಗಳು ಹಾಗೂ ಸೊಸೆಯ ಚಿನ್ನಾಭರಣ ಕಳವಾಗಿದ್ದು, ಸುಳ್ಯ ಪೊಲೀಸರಿಗೆ ರಾತ್ರಿಯೇ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ
ಮತ್ತೊಂದು ಪ್ರಕರಣದಲ್ಲಿ ಜಾಲ್ಸೂರಿನ ಸಿಂಡಿಕೇಟ್ ಬ್ಯಾಂಕ್ ಸಮೀಪವಿರುವ ಜೋಗಿ ಬೈದರಕೊಳಂಜಿ ಎಂಬವರ ಅಂಗಡಿಯ ಬೀಗ ಮುರಿದ ಕಳ್ಳರು ಡ್ರಯರ್ ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ ಸುಮಾರು ಎರಡು ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳಾದ ಸೋಪು, ಜ್ಯೂಸ್ ಬಾಟ್ಲಿಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ.
ಹಾಗೆಯೇ ಗೂಡಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಮಾರಾಟಕ್ಕಿಟ್ಟಿದ್ದ ಕೊಡೆ ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನುಕಳವುಗೈದ ಘಟನೆ ಜಾಲ್ಲೂರು ಗ್ರಾಮದ ವಿನೋಬನಗರದದಲ್ಲಿ ಜು.15ರಂದು ರಾತ್ರಿ ಸಂಭವಿಸಿದೆ. ಕೋನಡ್ಕ ಪದವಿನ ಸುಂದರ್ ನಾಯಕ್ ಅವರು ವಿನೋಬನಗರದದಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದು, ಅವರ ಅಂಗಡಿಗೆ ರಾತ್ರಿ ವೇಳೆ ಬೀಗ ಮುರಿದು ನುಗ್ಗಿದ ಕಳ್ಳರು, ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ನಾಲ್ಕು ಕೊಡೆ, ವಿಮಲ್,
ಮಧು, ಚೈನಿ ಪ್ಯಾಕೇಟುಗಳು ಸೇರಿದಂತೆ ಅಂಗಡಿ
ಸಾಮಾಗ್ರಿಗಳನ್ನು ಕಳವುಗೈದಿದ್ದು, ಸುಮಾರು ಐದು
ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕಳೆದೆರಡು ವಾರಗಳಿಂದ ಸುಳ್ಯ ತಾಲೋಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ,ಜನರನ್ನು ಕಂಗೆಡಿಸಿದೆ.
.