ಟ್ವಿಟರ್ ನಲ್ಲಿ ನಕಲಿ ಖಾತೆ ತೆರೆದು ದೈವಾರಾಧನೆ ನಿಂದನೆ, ಅಶ್ಲೀಲ ಪೋಟೋ ಪೋಸ್ಟ್ – ಬೆಂಗಳೂರು ಮೂಲದ ಆರೋಪಿಯ ಬಂಧನ.

ಟ್ವಿಟರ್ ನಲ್ಲಿ ನಕಲಿ ಖಾತೆ ತೆರೆದು ದೈವಾರಾಧನೆ ನಿಂದನೆ, ಅಶ್ಲೀಲ ಪೋಟೋ ಪೋಸ್ಟ್ – ಬೆಂಗಳೂರು ಮೂಲದ ಆರೋಪಿಯ ಬಂಧನ.

ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಆಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಸೆನ್ ಕ್ರೈಂ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವರಾಜ್ ಹೆಚ್.ಕೆ ಪ್ರಾಯ 37 ವರ್ಷ, ತಂದೆ: ಕೆಂಪಯ್ಯ, ವಾಸ: ಉಷಾ ಕಾಂಪ್ಲೆಕ್ಸ್, ಜಕ್ಕೂರು ಮೇನ್ ರೋಡ್, ಅಮೃತಹಳ್ಳಿ, ಬೆಂಗಳೂರು ಉತ್ತರ ಎಂದು‌ ಗುರುತಿಸಲಾಗಿದೆ.

ಟ್ವಿಟರ್ ನಲ್ಲಿ ನಕಲಿ ಖಾತೆಯ ಮೂಲಕ ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ (ರಿ) ಸಂಘಟನೆ ಸೆನ್ ಕ್ರೈಂ ಪೋಲಿಸರಿಗೆ ದೂರು ನೀಡಿತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಕುಲದೀಪ್ ಕುಮಾರ್ ಆರ್ ಜೈನ್ ಅವರ ಮಾರ್ಗದರ್ಶನದಂತೆ ಸಿಸಿಬಿ ಘಟಕದ ಎಸಿಪಿ ಪಿ‌.ಎ. ಹೆಗ್ಡೆ ಅವರ ನೇತೃತ್ವದ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂ.ಪಿ. ಹಾಗೂ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು

ರಾಜ್ಯ