
ಪುತ್ತೂರು : 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು , ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿಗೆ ಅತ್ಯುತ್ತಮ ಫಲಿತಾಂಶ ದೊರಕಿದೆ .ಒಟ್ಟು 37 ವಿದ್ಯಾರ್ಥಿ ಗಳ ಪೈಕಿ 33 ಜನ ಉತ್ತೀರ್ಣಗೊಂಡು ಡಿಸ್ಟಿಂಕ್ಷನ್ ನಲ್ಲಿ 8 , ಪ್ರಥಮ ಶ್ರೇಣಿಯಲ್ಲಿ 22 , ದ್ವಿತೀಯ ಶ್ರೇಣಿಯಲ್ಲಿ 3 ಜನ ಉತ್ತೀರ್ಣಗೊಂಡು ಶೇ 90 ಫಲಿತಾಂಶ ಲಭಿಸಿದೆ .ಶೃಧನ್ ಆಳ್ವ 589 ( 94.24%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಶಾಲೆಗೆ ಪ್ರಥಮ ಸ್ಥಾನ ,ಫಾತಿಮತ್ ಆಶಿಫ ಎ ಎನ್ 575 ( 92% ) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ . ಜುನೈಹ 553 ( 88.48% ) , ಅಸೀಮ ಇಶ್ರತ್ 550 ( 88% ) , ಅವಿನ್ ರೈ ಎಂ 549 ( 87.84 % ) , ಫಾತಿಮತ್ ಫಾಯಿಝ 546 ( 87.36% ) , ಸಮೀಕ್ಷಾ 541 ( 86.56% ) , ಚೈತನ್ಯ ಎ ಪಿ 534 ( 85.44% ) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.

