ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗದಲ್ಲಿ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯಾಗಾರದ ಉದ್ಘಾಟನೆ.

ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗದಲ್ಲಿ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯಾಗಾರದ ಉದ್ಘಾಟನೆ.

ಶ್ರೀ ಆದಿಚುಂಚನಗಿರಿ ಶಾಖಾ ಮಠ ಹಾಗೂ ಶ್ರೀ ಕಾಲಭೈರವೇಶ್ವರ ದೇವಸ್ಥಾನ,ಶರಾವತಿ ನಗರ, ಶಿವಮೊಗ್ಗದಲ್ಲಿ ಎ.24 ರ ಸೋಮವಾರ 12 ರಿಂದ 15 ವಯಸ್ಸಿನ ಬಾಲಕರಿಗೆ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯಾಗಾರವನ್ನು ಶಿವಮೊಗ್ಗದ ಶರಾವತಿ ನಗರದಲ್ಲಿರುವ ಶ್ರೀ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಾಗಾರದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ನಿರ್ದೇಶಕರಾದ ಶ್ರೀಯುತ ಸತೀಶ್ ಡಿ.ವಿ., ಉದ್ಘಾಟಿಸಿದರು. ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಾ ಹಾಗೂ ಬಿ ಜಿ ಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಅಮೀಶ್ ರವರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯ