
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಅಂದರೆ ಮೇ 10ರಂದು ನಡೆಯಲಿದ್ದು, ಮೇ13ರಂದು ಮತ ಎಣಿಕೆ ನಡೆಯಲಿದೆ.ರಾಜ್ಯದಲ್ಲಿ ಇಂದಿನಿಂದಲೇ (ಮಾ.29) ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಾಗಲಿದೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್
ಕುಮಾರ್ ಈ ಮಾಹಿತಿ ನೀಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಇಂದು (ಮಾ.29) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 24ರಂದು ಪ್ರಸ್ತುತ ಅಂದರೆ 15ನೇ ವಿಧಾನಸಭೆಯ ಅವಧಿ ಮುಗಿಯಲಿದೆ.
ರಾಜ್ಯದಲ್ಲಿ 5.22 ಕೋಟಿ ಮತದಾರರಿದ್ದಾರೆ. 2.62 ಕೋಟಿ ಪುರುಷ ಹಾಗೂ 2.59 ಕೋಟಿ ಮಹಿಳಾ ಮತದಾರರಿದ್ದಾರೆ. 4699 ತೃತೀಯಲಿಂಗಿ ಮತದಾರರಿದ್ದಾರೆ.
9.17 ಲಕ್ಷ ಮತದಾರರು ಇದೇ ಮೊದಲ ಬಾರಿ ಮತ
ಚಲಾಯಿಸಲಿದ್ದಾರೆ. 80 ವರ್ಷ ಮೇಲ್ಪಟ್ಟವರು ಹಾಗೂ
ವಿಕಲಚೇತನರು ಮನೆಯಿಂದಲೇ ಮತ
ಚಲಾಯಿಸಬಹುದು.58,282 ಮತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಒಂದೊಂದು ಮತಗಟ್ಟೆಗೆ 883 ಮತದಾರರಿದ್ದಾರೆ. ನಗರದಲ್ಲಿ 24,063 ಮತಗಟ್ಟೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ 34, 219 ಮತಗಟ್ಟೆಗಳಿವೆ. ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ಆಯೋಗದ
ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

