
ಹೌದು ಈ ರೀತಿಯ ಬ್ಯಾನರ್ ಕಲ್ಮಕಾರ ರಸ್ತೆ ಬದಿಯಲ್ಲಿ ಕಂಡು ಬಂದಿದೆ.,
ಈ ಬ್ಯಾನರ್ ಅಲ್ಲಿ ಮತ ಯಾಚಿಸಲು ಬರುವವರಿಗೆ ದಿಕ್ಕಾರವನ್ನು ಕೂಗಾಲಾಗಿದೆ,
ಕಲ್ಮಕಾರು,ಹೊಸಕಲ್ಲು, ಬಾಳೆಬೈಲು ಸರ್ವರುತು ಸೇತುವೆ ನಿರ್ಮಾಣದ ಕಾಮಗಾರಿ ಮಾಡಲು ಕಳೆದ 25 ವರ್ಷ ದಿಂದ ಸಾಕಷ್ಟು ಬಾರಿ ಬೇಡಿಕೊಳ್ಳುತ್ತಿದ್ದರು ಯಾವುದೇ ಸ್ಪಂದನೆ ಕೊಡದೆ, ಊರಿನ ಜನರ ಸಂಕಷ್ಟಗಳಿಗೂ ನಮಗೂ ಯಾವುದೇ ಇಲ್ಲ ಎಂಬಂತೆ ವರ್ತಿಸುವ ರಾಜಕೀಯ ನಾಯಕರ ಜನಪ್ರತಿನಿಧಿಗಳ ಸರಕಾರದ ನಿರ್ಲಕ್ಷ ಧೋರಣೆಯನ್ನ ಖಂಡಿಸಿ ನಾವು ಮುಂಬರುವ ಚುನಾವಣೆಗೆ ಮತದಾನ ಬಹಿಷ್ಕರಿಸುವುದಾಗಿ ಶಪಥ ಮಾಡಿದ್ದೇವೆ.
ಅಲ್ಲವೇ ಕಳೆದ ಐದು ವರ್ಷದಲ್ಲಿ 25 ಲಕ್ಷ ಅನುದಾನ ಬಂದಿದ್ದು, ಗುದ್ದಲಿ ಪೂಜೆಯನ್ನ ನೇರವೇರಿಸುತ್ತಾರೆ. ಅನುದಾನ ಎಲ್ಲಿ ಹೋಯಿತು? ಗುದ್ದಲಿ ಪೂಜೆ ಮಾಡಿದ ಉದ್ದೇಶವೇನು? ಅಲ್ಲದೇ ಇದುವರೆಗೂ ಯಾವುದೇ ಕೆಲಸವನ್ನು ಮುಂದುವರಿಸದ ಕಾರಣ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಓಡಾಡಲು ತುಂಬಾ ಕಷ್ಟವಾಗುತ್ತದೆ, ಈ ಭಾಗದ ಜನರ ಅಳಲನ್ನು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಕೊಟ್ಟರು ರಸ್ತೆ ಅಭಿವೃದ್ಧಿಗೆ ಗಮನ ನೀಡದೆ ಕೇವಲ ಮತಯಾಚಿಸಲು ಬರುವ ಜನಪ್ರತಿನಿಧಿಗಳಿಗೆ ಧಿಕ್ಕಾರ,
ನಾವು ನೀಡಿದ ಮತಗಳಿಂದ ಜಯಶಾಲಿಗಲಾಗುತ್ತಿರುವ ರಾಜಕೀಯ ನಾಯಕರಿಗೆ ನಮ್ಮ ಧಿಕ್ಕಾರ ಎಂಬುದಾಗಿ ಬ್ಯಾನರ್ ಅಲ್ಲಿ ಬರೆಯಲಾಗಿದೆ.


