ಆಲೆಟ್ಟಿಯಲ್ಲಿ ಕಳಪೆ ಕಾಮಗಾರಿ ಆರೋಪ ಗ್ರಾಮಸ್ಥರಿಂದ ಜ.31 ರಂದು ಪ್ರತಿಭಟನೆಗೆ ಸಿದ್ಧತೆ.

ಆಲೆಟ್ಟಿಯಲ್ಲಿ ಕಳಪೆ ಕಾಮಗಾರಿ ಆರೋಪ ಗ್ರಾಮಸ್ಥರಿಂದ ಜ.31 ರಂದು ಪ್ರತಿಭಟನೆಗೆ ಸಿದ್ಧತೆ.


ಸುಳ್ಯ ತಾಲೋಕಿ ಆಲೆಟ್ಟಿ ಗ್ರಾಮದ. 4 ವರ್ಷದ ಹಿಂದೆ ಸುಳ್ಯ ಕೊಲ್ಚರ್ ರಸ್ತೆಯ ಕಲ್ಲೆಂಬಿ ಯಿಂದ ಕರ್ನಾಟಕ ಗಡಿ ಕನ್ನಡಿತೋಡು ತನಕ ಸುಮಾರು 11 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಆಗಿದೆ .ಭಾಗದಲ್ಲಿ ರಸ್ಥೆ ಡಾಮರಿಕರಣ ವಾಗುತ್ತಿದ್ದು ಸಂಪೂರ್ಣ ಕಳಪೆ ಕಾಮಗಾರಿ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ, ಈ ಬಗ್ಗೆ ಅಧಿಕಾರಿ ಶೀಘ್ರ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಉತ್ತಮ ರೀತಿಯಲ್ಲಿ ಮರು ಢಾಮರಿಕರಣಕ್ಕೆ ಒತ್ತಾಯಿಸಿದ್ದಾರೆ, ಇಂದು ಢಾಮರಿಕರಣ ಮಾಡಿದ ಜಾಗದಲ್ಲಿ ಬೆರಳಿಂದ ತೆಗೆದರು ಡಾಮರು ಎದ್ದು ಬರುತ್ತಿದ್ದು ಈ ರೀತಿ ಡಾಮರಿಕರಣವಾದಲ್ಲಿ ವಾರದಲ್ಲಿ ಎಲ್ಲಾ ಡಾಮರು ಎದ್ದು ಹೋಗುವುದರಲ್ಲಿ ಸಂಶಯವಿಲ್ಲ , ಎಂದು ಗ್ರಾಮಸ್ಥರು ಆತಂಕಿತರಾಗಿದ್ದಾರೆ. ಜನರ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ ಎಂದು ಆಗ್ರಹಿಸಿ ಈ ಬಗ್ಗೆ ಸ್ಥಳೀಯ ಮುಖಂಡರಾದ ಸುದರ್ಶನ್ ಪಾತಿಕಲ್ಲು,ದಿನೇಶ್ ಕಣಕ್ಕೂರು.ಸತೀಶ್ ಕುಂಭಕೊಡು.ಪ್ರದೀಪ್ ಕೊಲ್ಲರಮೂಲೆ,ನೀಲಕಂಠ ಕೊಲ್ಲರಮೂಲೆ,ಲಕ್ಷ್ಮಣ ಕಣಕ್ಕೂರು, ಸೀತಾರಾಮ ಕೊಲ್ಲರಮೂಲೆ,ಚಿದಾನಂದ ಕೋಲ್ಚಾರ್, ಮೊದಲಾದವರ ನೇತ್ರದ್ವಲ್ಲಿ ನಾಳೆ ಸಾರ್ವಜನಿಕರನ್ನು ಒಟ್ಟು ಸೇರಿಸಿ ಪ್ರತಿಭಟನೆ ನಡೆಸುತ್ತಾರೆ ಪ್ರತಿಭಟನೆಗೆ ನಿರ್ಧಾರ ಮಾಡಿದವರು ತಿಳಿಸಿದ್ದಾರೆ.

ರಾಜ್ಯ