
ಸಾಮಾಜಿಕ ಜಾಲತಾಣ ಫೇಸ್ಬುಕ್, ಟ್ವಿಟರ್ ಹಾಗೂ ಇತರೆ ತಾಣಗಳಲ್ಲಿ ದೊರೆಯುವ ಯುವತಿಯ ಫೋಟೋಗಳನ್ನು ಕದ್ದು ಲೊಕ್ಯಾಂಟೋ ಎಂಬ ಡೇಟಿಂಗ್ ವೆಬ್ಸೈ ಟ್‌ನಲ್ಲಿ ನಕಲಿ ಪ್ರೊಫೈಲ್ ಸಿದ್ಧಪಡಿಸಿ ಗ್ರಾಹಕರಿಗೆ ವಂಚಿಸಿ, ಅಕ್ರಮವಾಗಿ ಹಣ ಗಳಿಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯ ನಿವಾಸಿಗಳಾದ ಮಂಜುನಾಥ್ಅಲಿಯಾಸ್ ಸಂಜು, ಮಲ್ಲಿಕಾರ್ಜುನಯ್ಯ ಮಂಜುನಾಥ್ ಅಲಿಯಾಸ್ ಬುಳ್ಳೆ, ಮೋಹನ್, ಹನುಮೇಶ್ ಮತ್ತು ರಾಜೇಶ್ ಅಲಿಯಾಸ್ ಕೋತಿ ಎಂಬುವರನ್ನು ಬಂಧಿಸಲಾಗಿದೆ ಆರೋಪಿಗಳು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದಾರೆ ಫೇಸ್‌ಬುಕ್, ಟ್ವಿಟರ್ ಹಾಗೂ ಇತರೆಡೆ ಸಿಗುವ ಯುವತಿಯ ಫೋಟೋಗಳನ್ನು ಲೊಕ್ಯಾಂಟೋ ವೆಬ್‌ಸೈಟ್ ನಲ್ಲಿ ಹಾಕಿ, ಅವರ ಹೆಸರಿನಲ್ಲಿ ಪ್ರೊಫೈಲ್ ಸಿದ್ಧಪಡಿಸುತ್ತಿದ್ದರು.ಅದನ್ನು ಕೆಲ ನಿರ್ದಿಷ್ಟ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಅಲ್ಲದೆ, ವೆಬ್ ಸೈಟ್ ಅಥವಾ ಆ್ಯಪ್‌ನಲ್ಲಿ ಯುವತಿಯರ ಪೋಟೋ ಕಂಡ ಗ್ರಾಹಕರು ಮುಂಗಡವಾಗಿ ಆ ಯುವತಿಯನ್ನು ಬುಕ್ ಮಾಡಿಕೊಳ್ಳಲು ಅಡ್ವಾನ್ಸ್ ಹಣ ವರ್ಗಾವಣೆ ಮಾಡುತ್ತಿದ್ದರು .ಮತ್ತೂಂದೆಡೆ ಹಣ ವರ್ಗಾವಣೆ ಆಗುತ್ತಿದ್ದಂತೆ ಆ ಪ್ರೊಫೈಲ್ ಡಿಲೀಟ್ ಮಾಡುತ್ತಿದ್ದರು.
ಅದನ್ನು ಗ್ರಾಹಕರು ಪ್ರಶ್ನಿದರೆ ಬೆದರಿಕೆ ಹಾಕಿ
ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು ಎಂದು
ಪೊಲೀಸರು ತಿಳಿಸಿದ್ದಾರೆ.

