ಸುಳ್ಯ ನಗರ ಪಂಚಾಯತ್‌ನ ಕಲ್ಚೆರ್ಪೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ     ಗ್ಯಾಸಿಫಿಕೇಶನ್ ಯಂತ್ರದ ಉದ್ಘಾಟನಾ ಕಾರ್ಯಕ್ರಮ.

ಸುಳ್ಯ ನಗರ ಪಂಚಾಯತ್‌ನ ಕಲ್ಚೆರ್ಪೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಗ್ಯಾಸಿಫಿಕೇಶನ್ ಯಂತ್ರದ ಉದ್ಘಾಟನಾ ಕಾರ್ಯಕ್ರಮ.

ಸುಳ್ಯನಗರ ಪಂಚಾಯತ್ ನ ಈ ಪ್ರಯೋಗ ರಾಜ್ಯಕ್ಕೆ ಮಾದರಿ: ಸುನಿಲ್ ಕುಮಾರ್.

ಸುಳ್ಯ ನಗರ ಪಂಚಾಯತ್‌ನ ಕಲ್ಚೆರ್ಪೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಗ್ಯಾಸಿಫಿಕೇಶನ್ ಯಂತ್ರದ
ಉದ್ಘಾಟನಾ ಕಾರ್ಯಕ್ರಮ.ಮಂಗಳವಾರ ನಡೆಯಿತು. ಗ್ಯಾಸಿಫಿಕೇಶನ್ ಯಂತ್ರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು‌ ನಂತರ ಮಾತನಾಡಿ ಒಣ ಕಸದಿಂದ
ವಿದ್ಯುತ್ ಉತ್ಪತ್ತಿ ಆಗುವುದಾದರೆ ಅದೊಂದು ದೊಡ್ಡ ಸಾಧನೆ.ಸುಳ್ಯನಗರ ಪಂಚಾಯತ್ ನ ಈ ಪ್ರಯೋಗ ರಾಜ್ಯಕ್ಕೆ ಮಾದರಿ.ಸರಕಾರ ಮುಂದೆ ಈ ಅನುಭವವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ಚಿಂತನೆ ನಡೆಸುತ್ತೇವೆ, ಇಂದು ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿ ಪರಿಣಮಿಸಿದ್ದು ಕಸ ವಿಲೇವಾರಿ ಇಂದು ಇದೇ ಕಸದಿಂದ ವಿದ್ಯುತ್ ಉತ್ಪಾದಿಸುವ ಪ್ರಯೋಗಿಕ ಪಯತ್ನ ಯಶಸ್ವಿಯಾಗಿದೆ, ಮುಂದಿನ ದಿನಗಳಲ್ಲಿ ಇಲ್ಲಿಯ ಸಾದಕ ಭಾದಕವನ್ನು ನೋಡಿಕೊಂಡು ಬೇರೆಕಡೆಗಳಿಗೂ ವಿಸ್ತರಿಸುವ ಚಿಂತನೆ ನಡೆಸಲಾಗುವುದು ಎಂದು ಹೇಳಿದರು. .ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ,ಸಚಿವ ಎಸ್ ಅಂಗಾರ, ವಿದಾನ ಪರಿಷತ್ ಸದಸ್ಯ, ಮೀನುಗಾರಿಕಾ ನಿಗಮದ ಆದ್ಯಕ್ಷ ಎ ವಿ ತೀರ್ಥರಾಮ ಪ್ರತಾಪ್ ಸಿಂಹ ನಾಯಕ್ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ. ವಿನಯ ಕುಮಾರ್ ಕಂದಡ್ಕ, ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ, ಗ್ರೀನ್ ಹೀರೊ ಖ್ಯಾತಿಯ ಆರ್ ಕೆ ನಾಯರ್ , ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ,ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ನಗರ ಪಂಚಾಯತ್ ವಿಪಕ್ಷ ನಾಯಕ ಬಾಲಕೃಷ್ಣ ಭಟ್ ,, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಎಚ್. ಸುಧಾಕರ್‌,ಪೆಟ್ರಿಕೋ‌ ಇಕೋ ಇನ್ನೋವೆಷನ್ಸ್ ಪ್ರೈ ನಿರ್ದೇಶಕರು ವೀರಪ್ಪ ವಿ. ಪಟ್ಟಣ ಶೆಟ್ಟಿ,ನಗರ ಪಂಚಾಯತ್ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.

ರಾಜ್ಯ