
ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮ ಜ.9 ರಂದು ಜಟ್ಟಿಪಳ್ಳ ಚೆನ್ನಕೇಶವ ದೇವರ ವಸಂತ ಕಟ್ಟೆ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 8 ಕ್ಕೆ ಗಣಪತಿ ಹವನದೊಂದಿಗೆ ಆರಂಭಗೊಂಡು,ಬೆಳಿಗ್ಗೆ 9 ರಿಂದ ಸತ್ಯನಾರಾಯಣ ದೇವರ ಪೂಜೆ, 11 ಗಂಟೆಯಿಂದ ಜಟ್ಟಿಪಳ್ಳದ ಭಾವನ ಸಂಗೀತ ಶಾಲೆಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.12 ಗಂಟೆಯಿಂದ ಮಹಾಪೂಜೆ , ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಗಂಟೆ 7 ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು ನಡೆದು ರಾತ್ರಿ 8.ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು , ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಯಂ ಆರ್ ಆದ್ಯಕ್ಷತೆ ವಹಿಸಲಿದ್ದು .,ನಗರ ಪಂಚಾಯತ್ ಅದ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ , ಬಂದರು ಮೀನುಗಾರಿಕೆ ,ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ,ದಕ್ಷಿಣ ವಲಯ ಅಂತರ್ ವಿಶ್ವ ವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಆಟಗಾರ ಯಜ್ಞೇಶ್ ಕಾನತ್ತಿಲರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು,ಬ್ಯಾಂಕ್ ಆಫ್ ಬರೋಡದ ನಿವೃತ ಸೀನಿಯರ್ ಮ್ಯಾನೆಜರ್ ದಯಾನಂದ ಆಳ್ವ, ನಿವೃತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೀವಿ ಶಿವರಾಮ, ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಡಾ. ಪುರುಷೋತ್ತಮ ಕೂಜುಗೋಡು ಸನ್ಮಾನವನ್ನು ನೆರವೇರಿಸಲಿದ್ದಾರೆ,ಕಾರ್ಯಕ್ರಮದಲ್ಲಿ ಶ್ರೀರಾಮ ಭಜನಾ ಸೇವಾ ಸಂಘದ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಉಪಾದ್ಯಕ್ಷ ರಮಾನಂದ ರೈ ಜಟ್ಟಿಪಳ್ಳ ಉಪಸ್ಥಿತಿಯಿರಲಿದ್ದಾರೆ. ರಾತ್ರಿ ೯ ರಿಂದ ಕೆ ಆರ್ ಗೋಪಾಲಕೃಷ್ಣ ಬಳಗದವರಿಂದ “ಸಂಸಾರ ಸಂಸ್ಕಾರ” ನೂತನ ಶೈಲಿಯ ಗಾಯನ- ವಾಚನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

