ಅರಂತೋಡು ಅಡ್ತಲೆ ಎಲಿಮಲೆ ರಸ್ತೆಗೆ ನಡೆಯುವ ಗುದ್ಧಲಿಪೂಜೆ ಕಣ್ಣೊರೆಸುವ ತಂತ್ರವಾಗಬಾರದು: ಗುದ್ಧಲಿ ಪೂಜೆಯಂದೇ ಕಾಮಗಾರಿ ಆರಂಭಿಸಿ: ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹ.

ಅರಂತೋಡು ಅಡ್ತಲೆ ಎಲಿಮಲೆ ರಸ್ತೆಗೆ ನಡೆಯುವ ಗುದ್ಧಲಿಪೂಜೆ ಕಣ್ಣೊರೆಸುವ ತಂತ್ರವಾಗಬಾರದು: ಗುದ್ಧಲಿ ಪೂಜೆಯಂದೇ ಕಾಮಗಾರಿ ಆರಂಭಿಸಿ: ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹ.

ಅರಮನೆಗಯದಲ್ಲಿ ಸೇತುವೆ ಮತ್ತು ಅರಂತೋಡು ಎಲಿಮಲೆ ರಸ್ತೆ ಅಭಿವೃದ್ದಿ ಪಡಿಸುವವರೆಗೆ ಹೋರಾಟ ಮುಂದುವರಿಸುತ್ತೇವೆ.

ಬಹುಸಮಯದ ಬೇಡಿಕೆಯಾಗಿದ್ದ ರಸ್ತೆ, ಮಡಿಕೇರಿ ಮತ್ತು ಕುಕ್ಕೆ ಸುಬ್ರಹ್ಮಣ್ಯವನ್ನು ಅತೀ ಹತ್ತಿರವಾಗಿಸಬಲ್ಲ ಅರಂತೋಡು ಅಡ್ತಲೆ ಎಲಿಮಲೆ ರಸ್ಥೆ ತೀರಾ ದುಸ್ಥಿತಿಯಲಿದ್ದು , ಇದು ಅಭಿವೃದ್ದಿ ಆಗಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು ಈ ಬಗ್ಗೆ ಹಲವು ಸಮಯಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ.ಇದೀಗ ಈ ರಸ್ಥೆಗೆ ಜ. 8 ರಂದು ಗುದ್ದಲಿಪೂಜೆ ನಡೆಯುತ್ತಿದೆ ಎಂಬ ಮಾಹಿತಿ ಮಾಧ್ಯಮದ ಮೂಲಕ ಸಿಕ್ಕಿದೆ .ಆದರೆ ಈ ಗುದ್ದಲಿ ಪೂಜೆ ಈ ಬಾಗದ ಜನರ ಕಣ್ಣೊರೆಸುವ ತಂತ್ರವಾಗಬಾರದು, ಗುದ್ದಲಿಪೂಜೆಯಂದೆ ಕಾಮಗಾರಿ ಆರಂಭವಾಗಬೇಕು ,ಈ ಬಗ್ಗೆ ನಾವು ಅದೇ ದಿನ ಮತ್ತೆ ಮನವಿ ಮಾಡುವವರಿದ್ದೇವೆ, ಗುದ್ದಲಿ ಪೂಜೆ ಮಾಡುವುದಾದಲ್ಲಿ ಸ್ವಾಗತ ಆದರೆ ಗುದ್ದಲಿ ಪೂಜೆ ಆಗಿ 15 ದಿವಸದಲ್ಲಿ ಕಾಮಗಾರಿ ನಡೆಸದ್ದಿದ್ದರೆ ಹಿತರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹ ಮಾಡಿದೆ.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿ ಮಾತನಾಡಿದ ಹಿತರಕ್ಷಣಾ ವೇದಿಕೆ ಅದ್ಯಕ್ಷ ಹರಿಪ್ರಸಾದ್ ಎ.ಕೆ ಮಾತನಾಡಿ,ಈ ರಸ್ತೆ 1996 ರಲ್ಲಿ ಡಾಮರಿಕರಣ ಆಗಿತ್ತು ,ಕಳೆದ 28 ವರ್ಷಗಳ ಹಿಂದೆ ಡಾಮರೀಕರಣ ನಂತರ ಏನೂ ಅಭಿವೃದ್ದಿ ಕಾರ್ಯ ಕೈಗೊಂಡಿಲ್ಲ ಕಳೆದ 15 ವರ್ಷಗಳಿಂದ ಹೋರಾಟಮಾಡುತ್ತಿದ್ದೇವೆ, ಒಂದು ವರ್ಷದಿಂದ ಚುನಾವಣಾ ಭಹಿಷ್ಕಾರದ ಬ್ಯಾನರ್ ಹಾಕಿದ್ದೇವೆ ಆದರೂ ಯಾವುದೇ ಅಧಿಕಾರಿಗಳು ಬೇಟಿ ಮಾಡಲಿಲ್ಲ ,ಅರಮನೆ ಗಯ ತೂಗು ಸೇತುವೆ ಬದಲಿಗೆ ಶಾಶ್ವತ ಸೇತುವೆ ಆಗಲು ಹಲವು ಬಾರಿ ಮನವಿ ಮಾಡಿದ್ದೇವೆ, ಕೇವಲ ಆಶ್ವಾಸನೆ ಮಾತ್ರ ನೀಡುತ್ತಿದ್ದಾರೆ, ಈ ಭಾಗದಲ್ಲಿ ಬಿಜೆಪಿ ಮತದಾರರು ಮಾತ್ರ ಹೆಚ್ಚಿಗೆ ಇದ್ದೇವೆ. ಆದರೂ ಬಿಜೆಪಿ ಈ ಬಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಹೇಗಿದ್ದರು ಮತ ಬೀಳಬಹುದು ಎಂಬ ಆಲೋಚನೆ ಆಗಿರಬಹುದು, ಕೆಲವೊಮ್ಮೆ ಅದು ನಿಮ್ಮ ಭ್ರಮೆಯೂ ಆಗಿರಬಹುದು ಅಭಿವೃದ್ದಿ ಕೆಲಸ ಮಾಡಿ ಮತ ಪಡೆಯಲು ಪ್ರಯತ್ನ ಪಡಿ ಎಂದು ಹರಿಪ್ರಸಾದ್ ಅಡ್ತಲೆ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯತನಕ್ಕೆ ರಾಜಿನಾಮೆ ಸಲ್ಲಿಸುತ್ತೇವೆ.

ಹಿತ ರಕ್ಷಣಾ ವೇದಿಕೆ ಸದಸ್ಯ ಲೋಹಿತ್ ಮೇಲಡ್ತಲೆ ಮಾತನಾಡಿ ನಾವು ಕಳೆದ 15 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಸ್ವಂತ ಖರ್ಚು ಹಾಕಿ ದುಡಿದಿದ್ದೇನೆ, ನನ್ನ ಮನೆಯಲ್ಲಿಯೇ ಬೂತ್ ಮೀಟಿಂಗ್ ಆಗ್ತದೆ, ನನ್ನ ಪತ್ನಿ ಸುಜಯ ಅರಂತೋಡು ಗ್ರಾಮ ಪಂ ಸದಸ್ಯೆ ಯಾಗಿದ್ದು , ಈ ಬಾಗದ ಅಭಿವೃದ್ದಿಯ ಬರವಸೆಯಲ್ಲಿ ಮತಯಾಚನೆ ಮಾಡಿದ್ದೆವು , ಆದರೆ ಅದು ಈಡೇರಿಸದ ನೋವಿದೆ, ಜನರಿಗೆ ಉತ್ತರ ನೀಡಲು ಸಾದ್ಯವಾಗದಾಗಿದೆ, ಗುದ್ದಲಿ ಪೂಜೆ ನಂತರ 15 ದಿವಸದಲ್ಲಿ ಕಾಮಗಾರಿ ಆರಂಭಿಸದಿದ್ದರೆ ಪಂಚಾಯತ್ ಸದಸ್ಯತನಕ್ಕೂ ರಾಜಿನಾಮೆ ಸಲ್ಲಿಸುವವರಿದ್ದೇವೆ ಎಂದು ಹೇಳಿದ ಅವರು, ಅಡ್ತಲೆ ಭಾಗದಲ್ಲಿ ಕುಡಿಯವ ನೀರಿನ ಸಮಸ್ಯೆ ಹೇಳತೀರದಾಗಿದೆ , ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ, ನೀರು ಹಾಕದೆ ಅದು ಶಿಥಿಲಾವಸ್ಥೆಗೆ ಬಂದಿದೆ.ನೀರಿರುವ ಬೋರ್ ಗಳಿಗೆ ಪಂಪ್ ಅಳವಡಿಸದೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಿದ್ದಾರೆ, ಗ್ರಾಮ ಮಟ್ಟದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಕೆಲಸ ಮಾಡಿದ್ದಾರೆ. ಆದರೆ ಮೇಲಿನ ಜನಪ್ರತಿನಿಧಿಗಳಿಗೆ ಅಭಿವೃದ್ದಿಯ ಇಚ್ಚಾಶಕ್ತಿ ಕೊರತೆಯಿಂದ ಹೀಗಾಗಿದೆ ಎಂದರು.
ಪತ್ರಿಕಾಗೋಸ್ಟಿಯಲ್ಲಿ ರಂಜಿತ್ ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ,ಮೋಹನ್ ಅಡ್ತಲೆ, ತೇಜಕುಮಾರ್ ಮೇಲಡ್ತಲೆ,ಶಶಿಕುಮಾರ್,ದುರ್ಗಾಪ್ರಸಾದ್ ಮೇಲಡ್ತಲೆ, ಸೌಮ್ಯ ಮೇಲಡ್ತಲೆ, ಶ್ಯಾಮಲ ಹರಿಪ್ರಸಾದ್,ಲತಾ ಅಡ್ತಲೆ ಮೊದಲಾದವರಿದ್ದರು.

ರಾಜ್ಯ