
ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗ ಬ್ರಹ್ಮ ಕ್ಷೇತ್ರದ”ಕೈ ಬಿಡದ ಮಹಾಕಾಳಿ ” ಕನ್ನಡ ಭಕ್ತಿ ಗೀತೆಗಳ ಧ್ವನಿ ಸುರುಳಿಯನ್ನು ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ನಾಗೇಶ್ ಕುಂದಲ್ಪಾಡಿ ಚಾಲನೆ ನೀಡಿದರು,ದಯಾ ಕ್ರಿಯೇಷನ್ ಮೂಲಕ ಹೊರ ಹೊಮ್ಮಿದ ದ್ವನಿಸುರುಳಿ ಬಿಡುಗಡೆಯಲ್ಲಿ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಹಾಗೂ ಧರ್ಮದರ್ಶಿ ಲೋಲಾಕ್ಷ ಬೆಟ್ಟದಪುರ ಮೊದಲಾದವರಿದ್ದರು,ರವಿ ಎಸ್ ಎಮ್ ಕುಕ್ಕಾಜೆಯವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದ್ದು,ದಿವ್ಯ ಶೆಟ್ಟಿ ವಾಮದಪದವು ಹಾಡಿದ್ದು ಬಾಲ ಪ್ರತಿಭೆ ಕು.ಸನುಷ ಕಲ್ಲುಗುಂಡಿ ನಟಿಸಿದ್ದಾಳೆ. ಸುದರ್ಶನ್ ತಾರಿದಳ ಕುಕ್ಕಾಜೆ



ಛಾಯಾಗ್ರಹಣ ಹಾಗೂ ನಿತಿನ್ ಕೋಟ್ಯಾನ್ ಉಜಿರೆ ಸಂಕಲನ,ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗ ಬ್ರಹ್ಮ ಕ್ಷೇತ್ರದ “ಕೈ ಬಿಡದ ಮಹಾಕಾಳಿ”ಕನ್ನಡ ಭಕ್ತಿ ಗೀತೆ ಯನ್ನು ,ಯೂ ಟ್ಯೂಬ್ ನಲ್ಲಿ ಆಲಿಸಬಹುದಾಗಿದೆ.

