ಹೆಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ:ಅಭಿಮಾನಿಗಳಿಗೆ ಸಂತಸ.

ಹೆಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ:ಅಭಿಮಾನಿಗಳಿಗೆ ಸಂತಸ.

ಡಿ 16 .ರಂದು ರಾಜ್ಯಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಹೆಚ್ ಡಿ ಕುಮಾರ ಸ್ವಾಮಿ ಹುಟ್ಟುಹಬ್ಬದ ದಿನ, ಕಳೆದ ವರ್ಷ ರಾಜ್ಯದಲ್ಲಿ ಕೊರೊನ ತಾಂಡವದ ಸಂದರ್ಭ ತನ್ನ ಹುಟ್ಟು ಹಬ್ಬ ಆಚರಿಸುವುದಿಲ್ಲ ಎಂದು ಹೇಳಿಕೊಂಡಿದ್ದಲ್ಲದೆ, ತನ್ನ ಅಭಿಮಾನಿಗಳಿಗೆ ಹುಟ್ಟು ಹಬ್ಬದ ದುಂದುವೆಚ್ಚ ನಿಲ್ಲಿಸಲು ಕರೆ ನೀಡಿದ್ದರು ಇದೀಗ ಮತ್ತೆ ಅವರ ಅಭಿಮಾನಿಗಳಿಗೆ ಕುಮಾರಸ್ವಾಮಿ ಜೊತೆ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪುತ್ರ ಎಚ್.ಡಿ ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಎರಡು ಬಾರಿ ಇವರು ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದವರು 2004, 2008, 2013 ಹಾಗೂ 2018 ರಲ್ಲಿ ರಾಮನಗರ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರುಎರಡು ಅವಧಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ’ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದರು. ಈ ಯೋಜನೆಯನ್ವಯ ಮಾರ್ಚ 31, 2006 ರ ನಂತರ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಲ್ಲಿ 10 ಸಾವಿರ ರೂಪಾಯಿಗಳನ್ನು ಸರಕಾರದ ವತಿಯಿಂದ ಠೇವಣಿ ಇಡಲಾಗುತ್ತದೆ.
ಗ್ರಾಮ ವಾಸ್ತವ್ಯ, ಒಂದು ಬಾರಿ ರೈತರ ಸಾಲಮನ್ನಾ, ಲಾಟರಿ ನಿಷೇಧ, ಹೆಣ್ಣು ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮತ್ತು ಜನತಾ ದರ್ಶನ ಕಾರ್ಯಕ್ರಮಗಳು ಇವರಿಗೆ ಬಹಳಷ್ಟು ಜನಪ್ರಿಯತೆ ತಂದು ಕೊಟ್ಟವು.
ಕುಮಾರಸ್ವಾಮಿಯವರು ಚಲನಚಿತ್ರ ನಿರ್ಮಾಣ ಹಾಗೂ ಹಂಚಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಹಲವಾರು ಚಲನಚಿತ್ರಗಳ ನಿರ್ಮಾಪಕರಾಗಿದ್ದು, ಇವರ ನಿರ್ಮಾಣದ ಚಂದ್ರ ಚಕೋರಿ ಚಲನಚಿತ್ರ ರಾಜ್ಯಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ 365 ದಿನಗಳ ಕಾಲ ಪ್ರದರ್ಶನಗೊಂಡು ಸೂಪರ್ ಹಿಟ್ ಆಗಿತ್ತು.ಸೆಪ್ಟೆಂಬರ್ 2007 ರಲ್ಲಿ ಕುಮಾರಸ್ವಾಮಿ ತಮ್ಮದೇ ಆದ ’ಕಸ್ತೂರಿ’ ಕನ್ನಡ ವಾಹಿನಿ ಆರಂಭಿಸಿದರು. ಈಗ ಇದನ್ನು ಅವರ ಪತ್ನಿ ಅನಿತಾ ನೋಡಿಕೊಳ್ಳುತ್ತಿದ್ದಾರೆ .ಕುಮಾರಸ್ವಾಮಿ ಡಾ.ರಾಜಕುಮಾರ ಅವರ ಅಭಿಮಾನಿಯಾಗಿದ್ದು ಅವರಂತೆಯೇ ವೇಷಭೂಷಣ ಧರಿಸುತ್ತಿದ್ದರು. ತಮಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ, ಚಿತ್ರ ನಿರ್ಮಾಣದಲ್ಲಿಯೇ ಆಸಕ್ತಿ ಜಾಸ್ತಿ ಎಂದು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು.ಕಾರುಗಳ ಬಗ್ಗೆ ಒಲವು ಹೊಂದಿರುವ ಕುಮಾರಸ್ವಾಮಿಯವರ ಬಳಿ ಲ್ಯಾಂಬೊರ್ಗಿನಿ, ಪೋರ್ಶ, ಹಮ್ಮರ್ ಮತ್ತು ರೇಂಜ್ ರೋವರ್ ಮುಂತಾದ ದುಬಾರಿ ಕಾರುಗಳಿವೆ.
ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಯಾಗಿದ್ದಾಗ ಕೈಗೊಂಡ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಂದ ಇವರು ಜನಪ್ರಿಯ ನಾಯಕರಾಗಿ ಹೆಸರು ಮಾಡಿದರು.

ರಾಜ್ಯ