
ಕುಕ್ಕೆ ಕ್ಷೇತ್ರ ಪ್ರತಿದಿನ ಸಾವಿರಾರು ಭಕ್ತಾದಿಗಳು ಬರುವಂತಹ ಪ್ರದೇಶ, ದೇಶದ ನಾನಾ ಭಾಗದಿಂದ ಶ್ರೀ ಕ್ಷೇತ್ರಕ್ಕೆ ಭಕ್ತರು ಆಗಮಿಸುವುದರಿಂದ ಸುಬ್ರಹ್ಮಣ್ಯ ಪ್ರದೇಶ ಪುಟ್ಟ ನಗರದಂತೆ ಕಂಗೊಳಿಸುತ್ತದೆ, ಆಗಸದೆತ್ತರದ ಬೆಳೆದು ನಿಂತ ವಸತಿ ಕೇಂದ್ರಗಳು ಬೆರಗು ಮೂಡಿಸುತ್ತದೆ.ಸುಳ್ಯ ದಿಂದ ಸುಬ್ರಹ್ಮಣ್ಯ ಅನತಿ ದೂರದಲ್ಲಿದ್ದರೂ, ಸುಳ್ಯ ಭಾಗದವರು ಕ್ಷೇತ್ರದಲ್ಲಿ ಇಳಿದರೆ ಅವರೂ ಪ್ರವಾಸಿಗರಂತೆಯೇ..ಕಣ್ಣು ಹಾಯಿಸಿದೆಲ್ಲೆಲ್ಲಾ ಅಪರಿಚಿತ ಮುಖಗಳೆ..ಎಲ್ಲಾ ಇರುವ ದೇವರ ಬೀಡಲ್ಲಿ, ವೈದ್ಯನೆಂಭ ನಾರಾಯಣನ ಕೊರತೆ ಎದ್ದು ಕಾಣುತ್ತದೆ… ಮತ್ತು ಇಲ್ಲಿಯವರನ್ನು ಸದಾ ಕಾಡುತ್ತದೆ..
ಹೌದು …..


ಬೆಂಗಳೂರು ಮೂಲದ ಶಿವಪ್ಪ ಎನ್ನುವ ವ್ಯಕ್ತಿ ಇಂದು ಸುಬ್ರಹ್ಮಣ್ಯದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ, ಇಂತಹ ಘಟನೆಗಳಾದಾಗ,ಅಥವಾ ಅಪಘಾತಗಳಾದಾಗ ರೋಗಿಯನ್ನು ಪುತ್ತೂರು ಅಥವಾ ಸುಳ್ಯಕ್ಕೆ ಕರೆದೊಯ್ಯ ಬೇಕಾದ ಅನಿವಾರ್ಯತೆ ಇಲ್ಲಿಯವರದ್ದು, ಚಿಕಿತ್ಸಾ ಘಟಕ ವಿದ್ದರೂ, ನಿರಂತರ ವೈದ್ಯರ ಕೊರತೆ, ಈ ಬಗ್ಗೆ ಸಮಸ್ಯೆಗಳ ಪಟ್ಟಿಯನ್ನು , ಗ್ರಾಮ ಸಭೆ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಇದೀಗ ಸ್ಥಳೀಯ ವೈಧ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಂತಹ ಡ್ವಾಕ್ಟರ್ ಭಾನುಮತಿ,ಸಾಮಾಜ ಸೇವಕ ರವಿಕಕ್ಕೆಪದವ್ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಹಾಯತ್ ಅಧ್ಯಕ್ಷೆ ಲಲಿತಾಗುಂಡಡ್ಕ,ಆಡಳಿತ ವ್ಯವಸ್ಥೆ ವಿರುದ್ದ ತಿರುಗಿ ಬಿದ್ದಿದ್ದು ಕೂಡಲೇ ಸಂಭಂದ ಪಟ್ಟ ಅಧಿಕಾರಿಗಳು ಇಲ್ಲಿ ತುರ್ಥು ಚಿಕಿತ್ಸೆಗೆ ವೈದ್ಯರ ನೇಮಕ ಮಾಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.