ಪೆರಾಜೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕ ಉದ್ಘಾಟನೆ

ಪೆರಾಜೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕ ಉದ್ಘಾಟನೆ

ತಳಮಟ್ಟದ ಸಾಹಿತ್ಯ ಕಾರ್ಯಕ್ರಮವನ್ನು ಹೆಚ್ಚೆಚ್ಚು ನಡೆಸುವುದು ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ
ತೊಡಗಿದ್ದವರ ನೆನಪಿಗೆ ದತ್ತಿ ನಿಧಿಯನ್ನು ಸ್ಥಾಪಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ನುಡಿದರು.
ಮಡಿಕೇರಿ ಡಿ.2 ರಂದು ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲೆ, ತಾಲ್ಲೂಕು ಸಾ.ಪ.ಮಡಿಕೇರಿ ಇದರ
ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಉದ್ಘಾಟನೆ ಪದಾಧಿಕಾರಿಗಳ
ಮತ್ತು ಪದಗ್ರಹಣ ಜ್ಯೋತಿ ಉದ್ಘಾಟಿಸಿ

ಸಮಾರಂಭವನ್ನು ಪೆರಾಜೆಯ ಪ್ರೌಢಶಾಲೆಯಲ್ಲಿ
ಮಾತನಾಡಿದರು. ಪದಗ್ರಹಣದ ಸಂಕೇತವಾಗಿ ಪರಿಷತ್ ದ್ವಜವನ್ನು ನೂತನ ಅಧ್ಯಕ್ಷ ಗೋಪಾಲ
ಪೆರಾಜೆಯವರಿಗೆ ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ
ತಾಲೂಕು ಕ.ಸಾ. ಪ. ಅಧ್ಯಕ್ಷ ಅಂಬೆಕಲ್
ನವೀನ್ ಅವರು ಘಟಕದ ಪದಾಧಿಕಾರಿಗಳಾಗಿ
ಆಯ್ಕೆಯಾಗಿರುವ ಅಧ್ಯಕ್ಷ ಗೋಪಾಲ ಪೆರಾಜೆ,
ಗೌರವ ಕಾರ್ಯದರ್ಶಿಗಳಾದ ಸಂಗೀತ ರವಿರಾಜು ಮತ್ತು ಜಗದೀಶ ಕುಂಬಳಚೇರಿ ಹಾಗೂ ಕೋಶಾಧಿಕಾರಿ ಟೀನಾ ಸಂಪಾಜೆ ಅವರಿಗೆ ಪ್ರತಿಜ್ಞಾವಿಧಿಯನ್ನು

ಬೋಧಿಸಿದರು. ನಂತರ ಮಾತನಾಡಿದ ಅವರು ಸಂಪಾಜೆ ಘಟಕ ತನ್ನ ವ್ಯಾಪ್ತಿಯಲ್ಲಿ ಸಾಹಿತ್ಯ
ಚಟುವಟಿಕೆಗಳನ್ನು ನಡೆಸುವ ನಿರಂತರ ಮೂಲಕ ಕನ್ನಡ ಸೇವೆ ಮತ್ತು ಕನ್ನಡ ಅಭಿವೃದ್ಧಿಯನ್ನು ಮಾಡುವಂತಾಗಲಿ ಎಂದು ಹಾರೈಸಿದರು .ಕಾರ್ಯಕ್ರಮದಲ್ಲಿ ‘ಕನ್ನಡ ಮಾಧ್ಯಮ ಕಲಿಕೆ
ಮತ್ತು ಕನ್ನಡ ಶಾಲೆಗಳು’ ಎಂಬ ವಿಷಯದ
ಮೇಲೆ ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷ
ಚಂದ್ರಶೇಖರ್ ಪೇರಲ್ ಭಾಗವಹಿಸಿ ಕನ್ನಡ
ಶಾಲೆಗಳ ಸ್ಥಿತಿಗತಿಗಳು ಮತ್ತು ಕನ್ನಡ ಭಾಷೆಯನ್ನು
ಕಲಿಕಾ ಮಾಧ್ಯಮವಾಗಿ ಉಳಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರವಾಗಿ ಚರ್ಚಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಇದರ
ರಾಜ್ಯ ನಿರ್ದೇಶಕ ಹಾಗೂ ಮಂಗಳೂರು ವಿವಿ
ಯ ತುಳು ಭಾಷಾ ಪೀಠದ ಸಂಯೋಜಕ ಡಾ.
ಎಂ.ಕೆ. ಮಾಧವ, ಪೆರಾಜೆ ಗ್ರಾ.ಪಂ.ಅಧ್ಯಕ್ಷರಾದ ಚಂದ್ರಕಲಾ ಬಾಲಚಂದ್ರ, ಶಾಲಾ ಸಂಚಾಲಕ ಹರೀಶ್ ಮುಡ್ಕಜೆ, ಶಾಲಾ ಮುಖ್ಯೋಪಾಧ್ಯಾಯ ಎಂ.ಆರ್.ನರೇಂದ್ರ ಉಪಸ್ಥಿತರಿದ್ದರು.ಸಭೆಯ ಆರಂಭದಲ್ಲಿ ಮಡಿಕೇರಿ ಕ.ಸಾ.ಪ. ಕಾರ್ಯದರ್ಶಿ ಕೆ.ಯು. ರಂಜಿತ್, ಸ್ವಾಗತಿಸಿ ನಿರ್ವಹಣೆಯನ್ನು
ಕಾರ್ಯಕ್ರಮ ನಡೆಸಿಕೊಟ್ಟರು. ಜಗದೀಶ
ಕುಂಬಳಚೇರಿ ವಂದಿಸಿದರು.

ರಾಜ್ಯ