
ಮಡಪ್ಪಾಡಿಯಲ್ಲಿ ಭೂಕಂಪನವಾಗಿರುವ ಬಗ್ಗೆ
ವರದಿಯಾಗಿದ್ದು, ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ. ಹಲವರಿಗೆ ಶಬ್ದ ಕೇಳಿರುವ ಬಗ್ಗೆ ಕಂಪನದ ಅನುಭವವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 7.30 ರ ಸಮಯದಲ್ಲಿ ದೊಡ್ಡ ಸದ್ದು ದೇವಚಳ್ಳ ಭಾಗದಲ್ಲೂ ಕೇಳಿಸಿದೆ ಎಂದು ತಿಳಿದುಬಂದಿದೆ.ಗುತ್ತಿಗಾರು ಭಾಗದ ಕೆಲವು ಕಡೆಗಳಲ್ಲಿ ಶಬ್ಧ ಕೇಳಿ ಬಂದಿದೆ.ಆದರೆ ಮಡಪ್ಪಾಡಿಯಲ್ಲಿ ಶಭ್ದದೊಂದಿಗೆ ಸಣ್ಣದಾಗಿ ಭೂಮಿ ಕಂಪಿಸಿದೆ. ಕೆಲವರು ಇದನ್ನು ಗುಡುಗಿನ ಶಭ್ದ ಆಗಿರಬಹುದು ಎಂದು ತಿಳಿದಿದ್ದರು, ಆದರೆ ಸಾಮಾಜಿಕ ಜಾಲತಾಣದಲ್ಲಿ ಭೂ ಕಂಪನದ ಸುದ್ದಿ ಗಮನಿಸಿದ ಕೆಲವರು ಇದೀಗ ತಮಗಾದ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕೆಲವು ತಿಂಗಳು ವಿರಾಮ ನೀಡಿದ್ದ ಭೂಕಂಪನ ಮತ್ತೆ ಆರಂಭವಾಗಿದ್ದು ಇದು ತಾಲೊಕಿನ ಜನರಲ್ಲಿ ಸಣ್ಣದಾಗಿ ಆತಂಕ ಹುಟ್ಟು ಹಾಕಿದೆ.

