
ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿರುವ ಯೋಗೀಶ್ ಅವರ ಪುತ್ರಿ ಖುಷಿ ಇಂದು ನಿಧನರಾದರು.ಬಾಲಕಿಗೆ ಕಳೆದ ಆರು ತಿಂಗಳ ಹಿಂದೆ ಇವರಿಗೆ ಅನಾರೋಗ್ಯ ಕಾಡಿತ್ತು, ಕಳೆದ ಮೂರು ದಿನಗಳ ಹಿಂದೆ ಇವರ ಆರೋಗ್ಯ ಸಮಸ್ಯೆ ಉಲ್ಬಣಿಸಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತೆಗೆ ದಾಖಲು ಮಾಡಲಾಗಿತ್ತು. ಇವರನ್ನು ಉಳಿಸಿಕೊಳ್ಳುವ ಸಲುವಾಗಿ ಚಿಕಿತ್ಸಾ ವೆಚ್ಚ ಬರಿಸುವುದಕ್ಕಾಗಿ ಸ್ಥಳೀಯರು ಸಹಾಯ ಹಸ್ತ ಚಾಚಿದ್ದರು. ಇದನ್ನು ಮೀರಿ


ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ನಿಧನರಾದರೆಂದು ತಿಳಿದು ಬಂದಿದೆ. ಬಾಲಕಿಯ ನಿಧನಕ್ಕೆ ಅರಂತೋಡಿನ ನೂರಾರು ಮಂದಿ ಜಾತಿ -ಮತ- ಪಂತಗಳಿಲ್ಲದೆ ಕಂಭನಿ ಮಿಡಿದಿದ್ದಾರೆ.
ಮೃತರು ತಂದೆ, ತಾಯಿ ಲಲಿತ ಹಾಗೂ ಇಬ್ಬರು ಸಹೋದರರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.