
ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಗಳನ್ನು ಸಂದರ್ಶಿಸಲು ಬಂದಾಗ ಜೈಲಿನಲ್ಲಿರುವ ಅಪರಾಧಿ ಗಳಿಗೆ ಗಾಂಜಾ ಕೊಡಲು ಬಂದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರು ಆರನೇ ನ್ಯಾಯಲಯ ತೀರ್ಪು ನೀಡಿದೆ. ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾದ ಪ್ರಮೋದ್ ಎಂಬಾತನಿಗೆ ಮಾದಕ ವಸ್ತು ಗಾಂಜಾ ವನ್ನು ಕಾರ್ತಿಕ್ ಶಾಂತಿ ನಿಕೇತನ ಲೈನ್ ಮೈಸೂರ್ ರೋಡ್ KSRTC ಡಿಪೋ ಮಡಿಕೇರಿ ನಿವಾಸಿ ಎಂಬವನು ಕಾರಾಗೃಹ ಕ್ಕೆ ಸಂದರ್ಶನ ಕ್ಕೆ ಬಂದ ಸಂದರ್ಭ ಭದ್ರತೆ ದೃಷ್ಟಿಯಿಂದ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾಗಿದ್ದು ಆ ಬಗ್ಗೆ ಮಂಗಳೂರಿನ ಬರ್ಕೆ ಪೋಲಿಸ್ ಉಪ ನಿರೀಕ್ಷಕ ನರೇಂದ್ರ ಅವರು NDPS ಕಾಯಿದೆ ಯ ಕಲಾಂ 8(c) 20(b) (2) (A) ra ಅನ್ವಯ ದೂರು ದಾಖಲು ಮಾಡಿ ಸ್ಸ್ವತ್ತು ನ್ನು ವಶಪಡಿಸಿ ಕೊಂಡು ತನಿಖೆ ನಡೆಸಿದ್ದರು . ಬರ್ಕೆ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜೇಂದ್ರ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ವಿಚಾರಣೆ ನಡೆಸಿದ ಮಂಗಳೂರಿನ ಆರನೇ JMFC ನ್ಯಾಯಾಲಯದ ನ್ಯಾಯಾಧೀಶರಾದ ಪೂಜಶ್ರಿ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ಹೇಳಿ 1 ತಿಂಗಳು ಜೈಲು ಹಾಗೂ 2000 ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಾಕ್ಷಿಗಳ ವಿಚಾರಣೆಯನ್ನು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಅವರು ಮಾಡಿದ್ದರು.ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ್ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.

