ಕಡಬದ ಪ.ಪೂ. ಕಾಲೇಜಿನಲ್ಲಿ ಮುಸುಕುದಾರಿ ಯುವಕನಿಂದ ಮೂವರು ವಿದ್ಯಾರ್ಥಿಗಳಿಗೆ ಆ್ಯಸಿಡ್ ದಾಳಿ- ಆರೋಪಿ ಪೋಲಿಸ್ ವಶಕ್ಕೆ
ದ.ಕ ಜಿಲ್ಲೆ ಕಡಬದ ಪ.ಪೂ.ಕಾಲೇಜಿನಲ್ಲಿ ಮಾಸ್ಕ್ ಧರಿಸಿದ ಯುವಕನೊರ್ವ ಕಾಲೇಜು ಆವರಣದೊಳಗೆ ಆಗಮಿಸಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಲಿನ ಸಿಬಿ, ಅರ್ಚನ, ಅಮೃತ ಅವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಲಿದೆ.


































