ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯರ ನೇತ್ರತ್ವದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕುರಿತು ಅಧಿಕಾರಿಗಳ ಸಭೆ.ಅವಘಡಗಳು ಸಂಭವಿಸುವಲ್ಲಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು.
ಮಳೆಗಾಲದಲ್ಲಿ ಗುಡ್ಡ ಕುಸಿಯುವುದು, ರಸ್ತೆ ಸಮಸ್ಯೆ ಕೆಲವೊಂದು ಅವಘಡಗಳು ಸಂಬಂವಿಸುತ್ತದೆ. ಘಟನೆಯ ವಿಷಯ ತಿಳಿದ ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅಧಿಕಾರಿಗಳು ಬಂದಿಲ್ಲ ಎಂಬ ದೂರು ಕೇಳಿ ಬರಬಾರದು . ಆದ್ದರಿಂದ ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲರೂ…










