2023ರ ಕೆವಿಜಿ ಸುಳ್ಯ ಹಬ್ಬಕ್ಕೆ ಚಾಲನೆ. ತಾಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳ ಉದ್ಘಾಟನೆ
ಆದುನಿಕ ಸುಳ್ಯದ ನಿರ್ಮಾತೃ ಅಮರ ಶಿಲ್ಪಿ ಡಾ| ಕುರುಂಜಿ ವೆಂಕಟ್ರಮಣ ಗೌಡರು ಸುಳ್ಯದ ಕುರುಂಜಿಭಾಗ್ ನಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಕಟ್ಟಿ ಗ್ರಾಮೀಣ ಭಾಗದ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ತೊಂದರೆಯಾಗದ ರೀತಿಯಾಗಿ ಬೆಳೆಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ಹೊರಭಾಗದಲ್ಲಿ ಉನ್ನತ ಮಟ್ಟದಲ್ಲಿದ್ದಾರೆ. ಸುಳ್ಯದಲ್ಲಿಯೂ ಅನೇಕ ಮಂದಿ ಇದ್ದಾರೆ.…










