ಉಡುಪಿ: ಶೀರೂರು ಶ್ರೀಗಳ ಪರ್ಯಾಯ ವೈಭವ; ಸರ್ವಜ್ಞ ಪೀಠಾರೋಹಣ ಮಾಡಿದ ಶ್ರೀ ವೇದವರ್ಧನ ತೀರ್ಥರು
ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವು ಇಂದು (ಜನವರಿ 18) ಅತ್ಯಂತ ಸಂಭ್ರಮ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಐತಿಹಾಸಿಕ 'ಸರ್ವಜ್ಞ ಪೀಠ'ವನ್ನು ಏರುವ ಮೂಲಕ ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ವಹಿಸಿಕೊಂಡರು.…










