
ಸುಳ್ಯ ನಗರದ ಸಿ ಎ ಬ್ಯಾಂಕ್ ಸಮೀಪದ ತುಡಾರ್ ಚಂದ್ರಕಾಂತ್ ಉಷಾ ದಂಪತಿಗಳ ಪುತ್ರಿ ಸುಳ್ಯ ರೋಟರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 622 ಅಂಕ ಗಳಿಸುವುದರ ಮೂಲಕ ರಾಜ್ಯಕ್ಕೆ ಚತುರ್ಥ ಸ್ಥಾನಿಯಾಗಿದ್ದಾಳೆ.ತಿಂಗಳ ಹಿಂದೆ ಎಸ್ ಎಸ್ ಎಲ್ ಸಿ ಪಲಿತಾಂಶ ಬಂದಾಗ ಆಕೆಗೆ 620 ಅಂಕ ಲಭಿಸಿತ್ತು, ಸಮಾಜ ವಿಜ್ಞಾನ ಮತ್ತು ಇಂಗ್ಲೀಷ್ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಒಳಪಡಿಸಿದಾಗ ಎರಡರಲ್ಲೂ ತಲಾ ಒಂದು ಅಂಕ ಹೆಚ್ಚಳವಾಗಿ ಒಟ್ಟು622 ಲಭಿಸಿದ್ದು ಈ ಮೂಲಕ ಸನಿಹಾ ಶೆಟ್ಟಿ ಈ ಬಾರಿಯ ಎಸ್ ಎಎಸ್ ಎಲ್ ಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.
ಈಕೆ ಕಲಿಕೆಯಲ್ಲಷ್ಟಲ್ಲದೆ ಕ್ರೀಡೆ, ನೃತ್ಯ, ಯೋಗ, ಭರತನಾಟ್ಯ, ಸಂಗೀತ,ಯಕ್ಷಗಾನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಾದನೆ ಮೆರೆದಿರುವ ಬಹುಮುಖ ಪ್ರತಿಭೆ

