ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ| ಜಿ. ಪರಮೇಶ್ವರರವರಿಗೆ ಸನ್ಮಾನ

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ| ಜಿ. ಪರಮೇಶ್ವರರವರಿಗೆ ಸನ್ಮಾನ

ಕರ್ನಾಟಕ ಸರಕಾರದ ಗೃಹ ಸಚಿವರಾದ ಡಾ| ಜಿ. ಪರಮೇಶ್ವರರವರನ್ನು ಇಂದು ಮಂಗಳೂರಿನಲ್ಲಿ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಮತ್ತು ಗೂನಡ್ಕದ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆ ಮತ್ತು ಸಂಸ್ಥೆಯು ಬಿಡುಗಡೆ ಮಾಡಿದ ಬೆಳೆಕಿನೆಡೆಗೆ ಹತ್ತು ಮುಸ್ಲಿಂ ಕತೆಗಳ ಪುಸ್ತಕವನ್ನು ನೀಡಿ ಮಂಗಳೂರಿನಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾದ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್,  ಮಾಜಿ ಶಾಸಕರಾದ ಜೆ ಆರ್ ಲೋಬೋ, ಚಿತ್ರನಟಿ ಭಾವನ,ಉಧ್ಯಮಿ ಎ.ಜೆ ಮೆಡಿಕಲ್ ಕಾಲೇಜು ಅಧ್ಯಕ್ಷರಾದ ಎ  ಜೆ ಶೆಟ್ಟಿ,ಕಣಚೂರ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಕಣಚೂರು ಮೋಣು, ಕಾಂಗ್ರೇಸ್ ಮುಖಂಡರಾದ ಮಿಥುನ್ ರೈ,ಜಿ ಎ ಬಾವ, ಡಾಕ್ಟರ್ ಇಫ್ತಿಕಾರ್ ಅಲಿ,ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ