

ಬೈಕ್ ಅಪಘಾತ ಸಂಭವಿಸಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದಲ್ಲಿ ನಡೆದಿದೆ.ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.



ದಂಪತಿಗಳು ಬೈಕ್ ನಲ್ಲಿ ಸುಳ್ಯದಿಂದ ಮಂಡೆಕೋಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದೆ ಎನ್ನಲಾಗಿದೆ.ಗುದ್ದಿದ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಪತಿ ಭವಾನಿಶಂಕರ್ ಅವರಿಗೆ ಗಾಯಗಳಾಗಿದ್ದು,ಪತ್ನಿ ಲೀಲಾವತಿ ಅವರ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಗಾಯಾಳುಗಳಿಬ್ಬರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ ಪಾದಾಚಾರಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದರೆ.
