
ಸುಳ್ಯ: ಜೂನ್ 4 ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸುಳ್ಯ ನಿರ್ಧರಿಸಿದೆ ಈ ಬಗ್ಗೆ ಸಮಿತಿಯ ಗೌರಾವಾಧ್ಯಕ್ಷ ಗೋಪಾಲ ಕೃಷ್ಣ ಬೋರ್ಕರ್ ತಿಳಿಸಿದ್ದಾರೆ.



ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತೀ ವರ್ಷ ನಾವು ಈ. ರೀತಿಯಲ್ಲಿ ಪೂಜಾ ಸೇವೆ ನಡೆಸಿಕೊಂಡು ಬರುತ್ತಿದ್ದು ಈ ಬಾರೀ ಜೂನ್ 4 ಆದಿತ್ಯವಾರದಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸುವಂತೆ ಕೇಳಿ ಕೊಂಡರು.ಅಲ್ಲದೇ ಅದೇ ದಿನ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ‘ಕಾರ್ತಿಕೇಯ ಸಭಾಭವನ’ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ . ಧಾರ್ಮಿಕ ಉಪನ್ಯಾಸವನ್ನು ಹಿಂದು ಫಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ನಡೆಸಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಬೋರ್ಕರ್ ಭಗವಾನ್ ಕನ್ಕ್ಷನ್ ಸುಳ್ಯ ವಹಿಸಲಿದ್ದು ಮುಖ್ಯ ಅತಿಥಿಳಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ , ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸೇವಾ ಸಮಿತಿ ಅಧ್ಯಕ್ಷ ಶ್ರೀ ಜಯರಾಮ ರೈ ಜಾಲ್ಸೂರು , ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ , ಹರೀಶ್ ರಾವ್ ಗಬ್ಬಲಡ್ಕ ಪಾಲ್ಗೋಳಲಿದ್ದಾರೆ ಎಂದು ಅವರು ತಿಳಿಸಿದರು ಈ ಸಂದರ್ಭದಲ್ಲಿ ಸುಧಾಕರ , ಸೂರ್ಯ ಮೊಗೇರ್ , ಶ್ಯಾಮ್ ಕುಮಾರ್ ಹೆಬ್ಬಾರ್ , ರಕ್ಷಿತ್ ಅಡ್ಕಾರ್ , ಪುಷ್ಪರಾಜ್ ಕೆ .ಜಿ ಅರಂಬೂರು. ಶರತ್ ಉಬರಡ್ಕ ,ಕಿಶನ್ ಮತ್ತಿತರರು ಉಪಸ್ಥಿತರಿದ್ದರು.
