ಬಿಜೆಪಿ ಸರಕಾರದಿಂದ ಕೃಷಿಕರಿಗೆ ಜನ ಸಾಮಾನ್ಯರಿಗೆ ಏನೂ ಪ್ರಯೋಜನ ವಿಲ್ಲ: ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ: ವೆಂಕಪ್ಪ ಗೌಡ.

ಬಿಜೆಪಿ ಸರಕಾರದಿಂದ ಕೃಷಿಕರಿಗೆ ಜನ ಸಾಮಾನ್ಯರಿಗೆ ಏನೂ ಪ್ರಯೋಜನ ವಿಲ್ಲ: ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ: ವೆಂಕಪ್ಪ ಗೌಡ.

ತಾಲೂಕಿನ 10 ಗ್ರಾಮದಲ್ಲಿ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗ ಇದೆ.ಬಿಜೆಪಿ ಆಡಳಿತದ ಸರಕಾರದಿಂದ ಸ್ಪಂದನೆ ನೀಡಿಲ್ಲ. ಬಹುತೇಕ ತೋಟಗಳು ಒಣಗಿ ಹೋಗಿದ್ದು ನೀರಿನ ಸೌಲಭ್ಯ ಸಮರ್ಪಕವಾಗಿ ಮಾಡಿಲ್ಲ. ಜನರು ಸಂಕಷ್ಟಕ್ಕೊಳಗಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಗೆ ಬಯಸಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.ರಾಸಾಯನಿಕ ಗೊಬ್ಬರಗಳ ಬೆಲೆ 700 ರಿಂದ 1600ಕ್ಕೆ ಏರಿದೆ. ಆಧಾರ್ – ಪಾನ್ ಲಿಂಕ್‌ಗೆ 1000 ಹಣ ಪಡೆಯುತ್ತಾರೆ ಇದೆಲ್ಲವು ಜನರಿಗೆ ಹೊರೆಯಲ್ಲವೇ. ಕುಡಿಯುವ ನೀರಿನಿಂದ ಹಿಡಿದು ಬಚ್ಚಲು ಮನೆಗೆ ಹೋಗುವಲ್ಲಿಯವರೆಗೂ ಪ್ರತಿಯೊಂದಕ್ಕೂ ಬಿಜೆಪಿ ಟ್ಯಾಕ್ಸ್ ಹಾಕುತ್ತಿದೆ ಎಂದು ಸುಳ್ಯ ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.ಮೇ.8ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿನಡೆಸಿ ಮಾತನಾಡಿದ ಅವರು ಸುಳ್ಯ ಕ್ಷೇತ್ರದ 60 ಕಡೆಗಳಲ್ಲಿ ಈ ಬಾರಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆಯಾಗಿದ್ದು ಇದನ್ನುಗಮನಿಸಿದಾಗ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಿದೆ ಎಂದು ಗೊತ್ತಾಗುತ್ತದೆ. ಜನರು ರೋಸಿ ಹೋಗಿ ಬ್ಯಾನರ್ ಅಳವಡಿಸಿದ್ದಾರೆ.

ಸುಳ್ಯಕ್ಕೆ ಬೈಪಾಸ್ ಅಗತ್ಯವಿದ್ದು ಅದರ ಪ್ರಸ್ತಾಪವೇ ಇಲ್ಲ.ಆದರೆ ಇದೀಗ ಬಿಜೆಪಿಗರು ಕ್ಷೇತ್ರದ ಅಭಿವೃದ್ಧಿಯೇ ಗೆಲುವಿಗೆ ಶ್ರೀರಕ್ಷೆ ಎಂದು ಹೇಳುವುದಾದರೆ ಅಂಗಾರರನ್ನು ಈ ಬಾರಿ ಬದಿಗೆ ಸರಿಸಿದ್ದು ಯಾಕೆ .. ಇದೆಲ್ಲವನ್ನು ಮತದಾರ ಗಮನಿಸುತ್ತಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ಬದಲಾವಣೆ ಆಗುವುದು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ ಕಳೆದ ಬಾರಿ ಸಂಪಾಜೆ, ಕಲ್ಮಕಾರು,ಮಡಪ್ಪಾಡಿ ಭಾಗದಲ್ಲಿ ಪ್ರಾಕೃತಿಕ ವಿಕೋಪ, ಪ್ರಳಯ ಆದಾಗ ಸರಕಾರವಾಗಲೀ, ಶಾಸಕರಾಗಿ ಸ್ಪಂದನೆ ನೀಡಿಲ್ಲ. ಕೇವಲ 5 -10 ಸಾವಿರ ನೀಡಿ ಕೈ ತೊಳೆದುಕೊಂಡಿದ್ದಾರೆ. ನಾವು ಚುನಾವಣೆಗಾಗಿ ಗ್ರಾಮಗಳಿಗೆ ಭೇಟಿ ನೀಡಿದಾಗ ಈ ಬಗ್ಗೆ ಜನರು ಹೇಳುತ್ತಿದ್ದಾರೆ.ಆದ್ದರಿಂದ ಬದಲಾವಣೆ ಮಾಡುತ್ತಾರೆನ್ನುವುದು ಗ್ಯಾರಂಟಿ ಎಂದು ಅವರು
ಹೇಳಿದರು.

ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ.

ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಅಂಗಾರರಿಗೇ ಹೆಚ್ಚು ಮತ ಬಂದಿದೆ. ಆರ್.ಎಸ್.ಎಸ್ ಕೂಡಾ ಅಂಗಾರರ ಪರ ಒಲವು ನೀಡಿದೆ. ಆದರೆ ಬಿಜೆಪಿ ಸ್ವಾಭಿಮಾನಿಗಳ ಬಣ ಪಟ್ಟು ಹಿಡಿದು ಅಭ್ಯರ್ಥಿ ಬದಲಾಯಿಸಿದ್ದು ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ. ಅಂಗಾರರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ಅವರಿಗೆ ಅನಾರೋಗ್ಯವಾಗಿದೆ.ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಅಂಗಾರರಿಗೇ ಹೆಚ್ಚು
ಮತ ಬಂದಿದೆ. ಆರ್.ಎಸ್.ಎಸ್ ಕೂಡಾ ಅಂಗಾರರ ಪರ ಒಲವು ನೀಡಿದೆ. ಆದರೆ ಬಿಜೆಪಿ ಸ್ವಾಭಿಮಾನಿಗಳ ಬಣ ಪಟ್ಟು ಹಿಡಿದು ಅಭ್ಯರ್ಥಿ ಬದಲಾಯಿಸಿದ್ದು ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ. ಅಂಗಾರರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ಅವರಿಗೆ ಅನಾರೋಗ್ಯವಾಗಿದೆ. ಅವರ ಜತೆಗಿದ್ದವರೆಲ್ಲ ಈ ಚುನಾವಣೆಯಲ್ಲಿ ಸೈಲೆಂಟ್ ಆಗಿದ್ದಾರೆ ಎಂದು ಹೇಳಿದರಲ್ಲದೆ, ಅಂಗಾರರ ಕೆಲಸವೇ ಶ್ರೀರಕ್ಷೆಯೆಂದು ಹೇಳುವುದಾದರೆ ಅವರನ್ನು ಬದಿಗೆ ಸರಿಸಿದ್ದು ಯಾಕೆ ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ರೈತರ ಪರವಾಗಿಯೂ ಸರಕಾರ ನಿಂತಿಲ್ಲ. ಅಡಿಕೆ ಎಲೆ ಹಳದಿ ರೋಗದ ಪರಿಶೀಲನೆಗೆಂದು ಸಚಿವ ಮುನಿರತ್ನರು ಸುಳ್ಯ ಕ್ಷೇತ್ರಕ್ಕೆ ಬಂದು ಹೋದರೇ ಹೊರತು ಪರಿಹಾರ ಏನೂ ಕೊಟ್ಟಿಲ್ಲ. ಅದ್ದರಿಂದ ಜನ ಬದಲಾವಣೆ ಬಯಸಿದ್ದಾರೆಂದು ಅವರು ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕೆ.ಪಿ.ಸಿ.ಸಿ.ಸಂಯೋಜಕ ಎಸ್.ಸಂಶುದ್ದೀನ್, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನ.ಪಂ. ಸದಸ್ಯ ಡೇವಿಡ್ ಧೀರಾ ಕ್ರಾಸ್ತ ಇದ್ದರು.

ರಾಜ್ಯ