ನೆಲ್ಲಿಹುದಿಕೇರಿ ಗ್ರಾಮದಲ್ಲಿ ಬೃಹತ್ ಗಾತ್ರದ ನಾಗರಹಾವು ಸೆರೆ.

ನೆಲ್ಲಿಹುದಿಕೇರಿ ಗ್ರಾಮದಲ್ಲಿ ಬೃಹತ್ ಗಾತ್ರದ ನಾಗರಹಾವು ಸೆರೆ.


ನೆಲ್ಲಿಹುದಿಕೇರಿ ಗ್ರಾಮದಲ್ಲಿ ಬೃಹತ್ ಗಾತ್ರದ ನಾಗರಹಾವು ಸೆರೆಹಿಡಿದು ಯಶಸ್ವಿಯಾಗಿ ಕಾಡಿಗೆ ಬಿಡಲಾಗಿದೆ.
ನೆಲ್ಲಿಹುದಿಕೇರಿ ಗ್ರಾಮದ ಸಂಪಿಗೆ ಕೊಲ್ಲಿ ಬಿ ಎಸ್ಟೇಟ್ ಲೈನ್ ಮನೆಯ ಕುಮಾರ್ ಅವರು ಕೋಳಿಗಳನ್ನು ಬಿಡಲು ಹೋಗುವ ಸಂದರ್ಭದಲ್ಲಿ ಕೋಳಿಯನ್ನು ಕೊಂದು ಹಾಕಿರುವ ದೃಶ್ಯ ಕಂಡುಬಂದಿದೆ. ಕೋಳಿಗೂಡಿನೊಳಗೆ ಹಾವು ಇರುವುದು ಕಂಡುಬಂದ ಹಿನ್ನಲೆಯಲ್ಲಿ ಕೂಡಲೇ ಗುಹ್ಯ ಗ್ರಾಮದ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದರು ಸುರೇಶ್ ಪೂಜಾರಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕೋಳಿಗೂಡಿನ ಒಳಗೆ ನಾಗರಹಾವನ್ನು ಸರೆ ಹಿಡಿದರು. ಹಾವು ಕೋಳಿ ಮರಿಯನ್ನು ನುಂಗಿದಲ್ಲದೆ ಕೋಳಿಯನ್ನು ಸಾಯಿಸಿತ್ತು‌ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾದರು ರಕ್ಷಣೆ ಮಾಡಿದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ಸುರೇಶ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ