
ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಪ್ರವಾಸದ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ನೆಲ್ಯಾಡಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ಕಾಲೋನಿ, ಮಾಯಿಪ್ಪಾಜೆ ಸಿ ಆರ್ ಸಿ ಕಾಲೋನಿಯಲ್ಲಿ ಮನೆ ಮನೆ ಭೇಟಿ ಮಾಡಲಾಯಿತು. ಕಲ್ಲುಗುಡ್ಡೆ ಬೆಥನಿ ವೃದ್ದಾಶ್ರಮಕ್ಕೆ ಭೇಟಿ ನೀಡಿದರು.



ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸ್ಥಳೀಯ ಪ್ರಮುಖರು, ಕಾರ್ಯಕರ್ತರೊಂದಿಗೆ ಮತಯಾಚಿಸಲಾಯಿತು.

ಶ್ರೀ ಉಳ್ಳಾಲ್ತಿ ದೈವಸ್ಥಾನ ನೂಜಿ, ಬಾಳ್ತಿಲ ಶಿರಾಡಿ ರಾಜನ್ ದೈವಸ್ಥಾನ, ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲು, ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಲಾಯಿತು.

ಶಿರಾಡಿ ಪೇರಾಮಜಲು ಅಡ್ಡಹೊಳೆ 2ನೇ ವಾರ್ಡ್ ನಲ್ಲಿ ಸ್ಥಳೀಯರು ಮತ್ತು ಕಾರ್ಯಕರ್ತರೊಂದಿಗೆ ಮತಯಾಚಿಸಿದರು.
ಕೌಕ್ರಡಿ ಗ್ರಾಮದ ಪಟ್ಲಡ್ಕ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿ ಸ್ಥಳೀಯರೊಂದಿಗೆ ಮತಯಾಚಿಸಿದರು.
ನೆಲ್ಯಾಡಿ ಗ್ರಾಮದ ಪಡ್ಡಾಡ್ಕ ಬೂತ್ ಸಂಖ್ಯೆ 20 ಮತ್ತು 21ರಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮತಯಾಚಿಸಲಾಯಿತು.
ಅಲಂತಾಯ ಗ್ರಾಮ ಬೂತ್ ಸಂಖ್ಯೆ 12 ರಲ್ಲಿ ಭೇಟಿ ನೀಡಿ ಸಭೆ ನಡೆಸಿ ಕಾರ್ಯಕರ್ತರೊಂದಿಗೆ ಮತಯಾಚಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.