ಕುಡಿಯುವ ನೀರಿಗಾಗಿ ಪರದಾಡಿದ ಕುದ್ಪಾಜೆ ದಲಿತ ನಿವಾಸಿಗಳು: ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ:ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹದಂತೆ ಬೋರ್ ಕೊರೆದು ನೀರಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು.

ಕುಡಿಯುವ ನೀರಿಗಾಗಿ ಪರದಾಡಿದ ಕುದ್ಪಾಜೆ ದಲಿತ ನಿವಾಸಿಗಳು: ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ:
ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹದಂತೆ ಬೋರ್ ಕೊರೆದು ನೀರಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು.

ಸುಳ್ಯ ತಾಲೂಕು ಕಸಬಾ ಗ್ರಾಮದ ಕುದ್ಪಾಜೆ ಎಂಬಲ್ಲಿ ಹಲವಾರು ದಲಿತ ಕುಟುಂಬದವರಿಗೆ ಕುಡಿಯಲು ನೀರು ಇಲ್ಲದ ಸಂದರ್ಭದಲ್ಲಿ ಕುದ್ಪಾಜೆ ದಲಿತ ನಿವಾಸಿಗಳು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಕೊಟ್ಟ ಹಿನ್ನಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ಕೊಟ್ಟು ನೀರಿನ ಸಮಸ್ಯೆಬಗ್ಗೆ ಅದಿಕಾರಿಗಳ ಗಮನಕ್ಕೆ ತಂದು ಇದೀಗ ಸ್ಥಳದಲ್ಲಿ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ನೀರಿನ ವ್ಯವಸ್ಥೆಗಾಗಿ ಈ ಹಿಂದೆ ಕುದ್ಪಾಜೆ ದಲಿತ ನಿವಾಸಿಗಳು ಚುನಾವಣೆ ಬಹಿಷ್ಕಾರ ಬ್ಯಾನರನ್ನು ಕೂಡ ಹಾಕಿದ್ದರು, ಅಂಬೇಡ್ಕರ್ ರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿ ಮೇ 5 ರಂದು ಕುದ್ಪಾಜೆಯಲಿ ಕುಡಿಯುವ ನೀರಿಗೋಸ್ಕರ ಬೋರ್ವೆಲ್ ಅನ್ನು ಕೊರೆಯಲಾಯಿತು ಈ ಸಂದರ್ಭದಲ್ಲಿ ನಗರ ಪಂಚಾಯಿತ್ ಮುಖ್ಯ ಅಧಿಕಾರಿ ಸುಧಾಕರ್ ನಗರ ಪಂಚಾಯತ್ ಸಿಬ್ಬಂದಿ ತಿಮ್ಮಪ್ಪ ಪಾಟಾಲಿ ನಗರ ಪಂಚಾಯತ್ ತ್ರಿಜಿಸ್ ಮಂಜು ಗುತ್ತಿಗೆದಾರರು ರೋಹನ್ ಪೀಟರ್ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಸಂಜೀವ ಕುದ್ಪಾಜೆ ಬಾಬು ಜಯನಗರ ಸುಂದರ ಕುದ್ಪಾಜೆ ಬಾಬು ಕುದ್ಪಾಜೆ ಮೊದಲಾದವರು ಉಪಸ್ಥಿತರಿದ್ದರು .

ರಾಜ್ಯ