ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದ ಅಭಿವೃದ್ಧಿ ಸಂಭಂದಿಸಿದ ಇಲ್ಲಿಯ ಸಮಸ್ಯೆಯನ್ ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ: ವೆಂಕಪ್ಪ ಗೌಡ ಪ್ರಶ್ನೆ

ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದ ಅಭಿವೃದ್ಧಿ ಸಂಭಂದಿಸಿದ ಇಲ್ಲಿಯ ಸಮಸ್ಯೆಯನ್ ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ
: ವೆಂಕಪ್ಪ ಗೌಡ ಪ್ರಶ್ನೆ

ಸುಳ್ಯದಿಂದ ಕಳೆ ಆರು ಅವಧಿಯಿಂದ ಗೆದ್ದಿರುಅಭ್ಯರ್ಥಿ ಅಂಗಾರರಿಗೆ ಈ ಬಾರಿ ಸೋಲಿನ ಬೀತಿ ಎದುರಾದ ಹಿನ್ನಲೆಯಲ್ಲಿ ಬಿಜೆ ಪಿಯವರು ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದಾರೆ , ಆದರೆ ಈ ಹೊಸ ಮುಖದಿಂದ ಕ್ಷೇತ್ರದ ಅಭಿವೃದ್ಧಿ ಸಂಭಂದಿಸಿದ ಇಲ್ಲಿಯ ಸಮಸ್ಯೆಯನ್ ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ ಎಂದು ಸುಳ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಬಿ ಜೆ ಪಿ ಅಭ್ಯರ್ಥಿ ಕುರಿತು ಪ್ರಶ್ನೆ ಮಾಡಿದ್ದಾರೆ ಎ.22 ರಂದು ಸುಳ್ಯ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಮತ್ತು ದೇಶದಲ್ಲಿ ಡಬ್ಬಲ್ ಇಂಜಿನ್ ಸರ್ಕಾರಗಳಿದ್ದರೂ, ಇಲ್ಲಿಯವರೇ ಸಚಿವರಿದ್ದು ಅವರದ್ದೇ ಪಕ್ಷದವರು ಭಿಕ್ಷೆ ಬೇಡಿ ನಗರಕ್ಕೆ ಹೊಂದಿ ಕೊಂಡಿರುವ ಜಟ್ಟಿಪಳ್ಳ – ದುಗಲಡ್ಕ ರಸ್ತೆ ಅಭಿವೃದ್ಧಿ ಹೋರಾಟ ಮಾಡುತ್ತಾರೆ ಎಂದಾದರೆ ಇಲ್ಲಿ ಅಭಿವೃದ್ಧಿ ಎಷ್ಟು ಆಗಿದೆ ಎಂದು ನಂಬಬಹುದೇ ಎಂದು ಪ್ರಶ್ನಿಸಿದರು. ಈಗಾಗಲೆ ಹಲವು ಕಡೆ ಮತದಾನ ಬಹಿಷ್ಕಾರ ನಡೆಯುತ್ತಿದೆ. ನಾವು ಮತದಾನ ಬಹಿಷ್ಕಾರದ ಕೂಗು ಇರುವ ಎಲ್ಲ ಕ್ಷೇತ್ರಕ್ಕೂ ಹೋಗಿ ಅಲ್ಲಿಯ ಜನರೊಂದಿಗೆ ಮಾತನಾಡಿ ಅವರ ಕೆಲಸ ಮಾಡಿ ಕೊಡುವ ಕುರಿತು ಭರವಸೆ ನೀಡುತ್ತೇವೆ. ಮತ್ತು ನಮ್ಮ ಅಭ್ಯರ್ಥಿ ಕೃಷ್ಣಪ್ಪರು ವಿದ್ಯಾವಂತರಲ್ಲದೆ ಬುದ್ದಿವಂತರಾಗಿದ್ದಾರೆ ಅವರು ಗೆದ್ದ ತಕ್ಷಣ ಆದ್ಯತೆಯಲ್ಲಿ ಆ ಕೆಲಸವನ್ನು ಮಾಡಿ ತೋರಿಸುತ್ತೇವೆ.


ನಮ್ಮ ಪಕ್ಷದಲ್ಲಿ ಒಂದಷ್ಟು ಗೊಂದಲವಿದ್ದು ಈಗ ಎಲ್ಲವೂ ಸರಿ ಆಗಿದೆ. ನಂದಕುನಾರ್ ಅಭಿಮಾನಿ ಬಳಗದವರು ತಟಸ್ಥರಾಗುತ್ತೇವೆ ಎಂದು ಹೇಳಿದ್ದು ನಾವು ಅವರ ಮನೆಗೆ ಹೋಗಿ ಅವರಲ್ಲಿ ಕೇಳಿಕೊಳ್ಳಲಾಗುವುದು .ಅವರೆಲ್ಲರೂ ಬಂದೇ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸರಸ್ವತಿ ಕಾಮತ್,ಸುರೇಶ್ ಎಂ.ಹೆಚ್., ಅನಿಲ್ ರೈ ಬೆಳ್ಳಾರೆ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಡೇವಿಡ್ ಧೀರಾ ಕ್ರಾಸ್ತ್ರ, ಜತ್ತಪ್ಪ ರೈ ಸುಳ್ಯ ಉಪಸ್ಥಿತರಿದ್ದರು.

ರಾಜ್ಯ