ಸಂಪಾಜೆ ಅಪಘಾತ ಘಟನೆ ಮಾಸುವ‌ ಮುನ್ನವೇ ಕಡಬದಲ್ಲಿ ಮತ್ತೊಂದು ಅಪಘಾತ.

ಸಂಪಾಜೆ ಅಪಘಾತ ಘಟನೆ ಮಾಸುವ‌ ಮುನ್ನವೇ ಕಡಬದಲ್ಲಿ ಮತ್ತೊಂದು ಅಪಘಾತ.

ಕಡಬ; ಕಾರು & ತೂಫಾನ್ ವಾಹನದ ನಡುವೆ ಅಪಘಾತ, ನಾಲ್ವರು ಮೃತ್ಯು.

ಸಂಪಾಜೆಯಲ್ಲಿ ಕಾರು ಬಸ್ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೆ ಕಡಬದಲ್ಲಿ ಇಂದು ನಡೆದ ಮತ್ತೊಂದು ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಕಡಬ ನೆಟ್ಟಣದ ಬಳಿಆಲ್ಟೋ ಕಾರು ಮತ್ತು ತೂಫಾನ್ ವಾಹನದ ನಡುವೆ ಭೀಕರ ಅಪಘಾತವುಂಟಾಗಿದ್ದು, ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಇದೀಗ ಸಂಭವಿಸಿರುವುದಾಗಿ ವರದಿಯಾಗಿದೆ.

ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.ಕಾರು ಮತ್ತು ತೂಫಾನ್ ವಾಹನ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ.ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆದಿದೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ನಿರೀಕ್ಷಿಸಲಾಗಿದೆ.

ರಾಜ್ಯ